ಕುವೆಂಪು ಸಾಹಿತ್ಯ ಲೋಕ-೪

Author : ಹ.ಕ. ರಾಜೇಗೌಡ

Pages 396

₹ 300.00




Year of Publication: 2016
Published by: ಸಿ.ವಿ.ಜಿ. ಪಬ್ಲಿಕೇಷನ್ಸ್

Synopsys

ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ನೀಡಿದ ಕೊಡುಗೆ ಅಪಾರ. ಕುವೆಂಪು ಅವರ ಬರಹಗಳಿಗೆ ಸಂಬಂಧಿಸಿದಂತೆ ಕುವೆಂಪು ಸಾಹಿತ್ಯ ಲೋಕ ಕೃತಿಯು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಈ ಕೃತಿಯಲ್ಲಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯ ಕುರಿತು ವಿಶ್ಲೇಷಣೆಗಳು ಇದ್ದು ದೇ. ಜವರೇಗೌಡರು ಬರೆದಿರುವ ಪಂಪ ಪ್ರಶಸ್ತಿಯ ಕುವೆಂಪು ಲೇಖನ, ಹಾ.ಮಾ. ನಾಯಕ ಅವರ ಕನ್ನಡದಲ್ಲಿ ರಾಮಾಯಣ, ಡಿ.ಕೆ. ರಾಜೇಂದ್ರ ಅವರ ಶ್ರೀ ರಾಮಾಯಣ ದರ್ಶನಂ ಮತ್ತು ಜನಪದ ರಾಮಾಯಣಗಳು ಮುಂತಾದವರ ವಿಶ್ಲೇಷಣಾತ್ಮಕ ಲೇಖನಗಳು ಈ ಕೃತಿಯಲ್ಲಿವೆ. 

 

ಶ್ರೀಮದ್ರಾಮಾಯಣ, ಮಹಾಭಾರತ, ಭಾಗವತಗಳು ಆದಿ ಅಂತ್ಯವಿಲ್ಲದ ಚಿರಂತನ ಕೃತಿಗಳು: ಅವು ಪರಬ್ರಹ್ಮನ ಪ್ರತಿಬಿಂಬಗಳು ಮಾತ್ರವಲ್ಲ, ಪರಬ್ರಹ್ಮ ಸ್ವರೂಪಿಗಳೆಂದರೂ ಸಲ್ಲುತ್ತದೆ. ಇವು ವಿಶ್ವದ ವಿಕಾಸದಂತೆ ಅನವರತ ವಿಕಾಸ ಮುಖಿಯಾಗಿವೆ. ಮಾನವ ವಿಕಾಸದ ಮಹಾಯಾತ್ರೆಯ ವಿಕ್ರಮಗಳನ್ನಿಲ್ಲಿ ಗುರುತಿಸಬಹುದು. ಅಧಿಮಾನಸಕ್ಕೇರಿದ ವಿಶ್ವಪುರುಷನ, ಪುರುಷೋತ್ತಮನ, ಪರಾತ್ಪರ ವಸ್ತುವಿನ ಪರಿಪೂರ್ಣಾಭಿವ್ಯಕ್ತಿಯವರೆಗಿನ ಮಾನವನ ವಿಕಾಸ ರಾಮಕಥೆಯ ವಿಕಾಸದಲ್ಲಿ ಮೇಳೆಸಿದೆಯೆಂದರೆ ಆಶ್ಚರ್ಯವಾಗದು. ಆದ್ದರಿಂದಲೇ ರಾಮಾಯಣ ನಿತ್ಯ ರಾಮಾಯಣವೆಂದು ಕರೆಸಿಕೊಳ್ಳುತ್ತಿದೆ.

ದೇ. ಜವರೇಗೌಡರು ಕುವೆಂಪು ಅವರ ಸಾಹಿತ್ಯ ಕೃಷಿ ಅದರಲ್ಲೂ ಮುಖ್ಯವಾಗಿ ಶ್ರೀರಾಮಾಯಣ ದರ್ಶನಂ ಬಗ್ಗೆ ಬರೆಯುತ್ತಾ, ’ಪ್ರಾಯಶಃ ಬೈಬಲ್ ಹೊರತಾಗಿ, ಜಗತ್ತಿನ ಯಾವ ಪವಿತ್ರಗ್ರಂಥವೇ ಆಗಲಿ, ಪುರಾಣೇತಿಹಾಸಗಳೇ ಆಗಲಿ ಮೇಲ್ಕಂಡ ಭಾರತೀಯ ಗ್ರಂಥಗಳಷ್ಟು ವ್ಯಾಪಕವಾಗಿ ಕಾಲಾತೀತವಾಗಿ, ಆಯಾಯ ಸಮಾಜಗಳ ಮೇಲೆ ಪ್ರಭಾವ ಬೀರಿದಂತಿಲ್ಲ. ಇಲಿಯಡ್ ಈನಿಯಡ್ ಷಹನಾಮಾದಿ ಮಹಾಕಾವ್ಯಗಳು ಆಯಾಯ ದೇಶಗಳಲ್ಲಿ ಗ್ರಂಥಾಲಯಗಳ ಕಪಾಟಗಳಲ್ಲುಳಿದಿವೆಯೇ ಹೊರತು, ಅಲ್ಲಿಯ ಜನರ ಬದುಕಿನಲ್ಲಿ ಒಂದಾಗಿಲ್ಲ; ಅಂದರೆ ಅವು ರಾಮಾಯಣದಂತೆ ನಿಚ್ಚಹಸುರಾಗಿರುವ, ಜೀವಂತ ಗ್ರಂಥಗಳಾಗಿ ಉಳಿದಿಲ್ಲ ರಾಮಾಯಣ ಭಾರತ ಭಾಗವತಗಳನ್ನಾಧರಿಸಿದ ಸಾಹಿತ್ಯ ಕೃತಿಗಳು ಅಂದಿನಿಂದ ಇಂದಿನವರೆಗೆ ಸಂಖ್ಯಾಪ್ರಮಾಣ ಗುಣಗಾತ್ರಗಳಲ್ಲಿ ವಿಪುಲವಾಗಿ ಬೆಳೆದಿರುವಂತೆ, ಮುಂದೆ ಬೆಳೆಯುವಂತೆ ಜಗತ್ತಿನ ಇತರ ಮಹಾ ಕಾವ್ಯಗಳನ್ನಾಧರಿಸಿದ ಗ್ರಂಥಗಳು ಬೆಳೆಯುತ್ತಿಲ್ಲ, ಮುಂದೆ ಬೆಳೆಯುವಂತಿಲ್ಲ’ ಎಂದಿದ್ದಾರೆ. 

About the Author

ಹ.ಕ. ರಾಜೇಗೌಡ

ಹ.ಕ. ರಾಜೇಗೌಡರು ಮೂಲತಃ ಮಂಡ್ಯ ನಾಗಮಂಗಲ ತಾಲ್ಲೂಕು ಹನುಮನಹಳ್ಳಿಯವರು. ಕೃಷಿಕ ಕುಟುಂಬದಲ್ಲಿ ಜನಿಸಿದ ರಾಜೇಗೌಡರು ನಾಡಿನ ಪ್ರಮುಖ ಸಂಶೋಧಕರಲ್ಲಿ ಒಬ್ಬರು. ಕನ್ನಡ (ಎಂ.ಎ) ಸ್ನಾತಕೋತ್ತರ ಪದವೀಧರರಾದ ಅವರು ಬೆಂಗಳೂರು, ಕನಕಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗಕ್ಕೆ ಸೇರಿದರು. ರಾಷ್ಟ್ರಕವಿ ಕುವೆಂಪು, ದೇಜಗೌ, ಹಾ.ಮಾ.ನಾಯಕ ಅವರ ಪ್ರಭಾವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಸಂಶೋಧನಾ ಕೃತಿಗಳ ಮೂಲಕ ಸಾಹಿತ್ಯಕ ವಲಯದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ವಿಮರ್ಶಾ ಕೃತಿ ’ವಿವೇಚನೆ’ ಕಥಾಸಂಕಲನಗಳಾದ ’ಜಗ್ಗಿನ ಜನಪದ ಕಥೆಗಳು’,’ಮಳೆ ಹುಯ್ಯುತ್ತಿದೆ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books