ಇದ್ದದ್ದನ್ನು ಇದ್ದಂತೆ ಹೇಳಬಲ್ಲ ಕಾರಣಕ್ಕೇ ಚಿಂತಕ ಜಿ. ರಾಜಶೇಖರ ಅವರು ನಾಡಿನ ಸಾಕ್ಷಿಪ್ರಜ್ಞೆ ಎನಿಸಿಕೊಂಡವರು. ಅವರ ’ಬಹುವಚನ ಭಾರತ’ದ ವೈಚಾರಿಕ ಬರಹಗಳು ಬಹುತ್ವದ ಮಹತ್ವವನ್ನು ಬಹುವಾಗಿ ಹೇಳುತ್ತದೆ. ಜೀವಪರತೆ ಅವರ ಬರಹಗಳ ಬಹುಮುಖ್ಯ ಕಾಳಜಿ ಎಂಬುದನ್ನು ಈ ಕೃತಿಯೂ ಸಾರುತ್ತದೆ. ’ಅಧರಕ್ಕೆ ಕಹಿ ಉದರಕ್ಕೆ ಸಿಹಿ’ ಎನ್ನುವಂತಹ ಅವರ ಪ್ರಬುದ್ಧ ವಿಚಾರ ಲಹರಿ ಕೃತಿಯಲ್ಲಿ ಹರಡಿಕೊಂಡಿದೆ.
1946ರ ಏಪ್ರಿಲ್ 3ರಂದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನಿಸಿದ ಜಿ. ರಾಜಶೇಖರ ಅವರು ಪದವಿ ಪಡೆದದ್ದು ಉಡುಪಿಯಲ್ಲಿ. ಮೊದಲಿಗೆ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿದ ಇವರು ಬಳಿಕ ಎಲ್‌ಐಸಿಯ ಉದ್ಯೋಗಿಯಾಗಿದ್ದರು. ಸಾಹಿತ್ಯ-ಸಮಾಜ- ರಾಜಕಾರನ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ಅವರು ಬಹುಸಂಖ್ಯೆಯ ಲೇಖನಗಳನ್ನು ಸತತವಾಗಿ ಪ್ರಕಟಿಸುತ್ತಲೇ ಬಂದಿದ್ದರೂ ಈ ಬರಹಗಳು ಸಂಕಲನಗೊಂಡು ಪ್ರಕಟಗೊಂಡಿದ್ದು ಕಡಿಮೆ. ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕೃತಿಗಳು: ’ಕಾಗೋಡು ಸತ್ಯಾಗ್ರಹ’, ಪರಿಸರ ...
READ MOREಮಾನವಿಕ-2015