‘ಸಾವಿರದ ಒಂದು’ ನರೇಂದರರ ಪೈ ಅವರ ಆಯ್ದ ವಿಮರ್ಶೆಯಾಗಿದೆ. ಇದಕ್ಕೆ ಲೇಕಕರ ಬೆನ್ನುಡಿ ಬರಹವಿದೆ: ಇಲ್ಲಿ ಕುಟ್ಟಿ, ಮಿಲನ್ ಕುಂದೇರಾ, ಇಕೊ ಉಂಬರ್ತೊ, ಓರಾನ್ ಪಮುಕ್, ಜೆನ್ನಿ ಎರ್ಪೆನ್‌ಬೆಕ್, ಓಲ್ಲಾ ತೊಗಾರ್ಝುಕ್, ಅದಾನಿಯಾ ಶಿಬ್ಲಿ, ಯೋನ ಫಾಸೆ, ಜಿಯಾ ಹೈದರ್ ರಹಮಾನ್, ಹನೀಫ್ ಖುರೇಶಿಯವರಂಥ ಪ್ರಸಿದ್ಧ ಲೇಖಕರು, ನೊಬೆಲ್ ಪುರಸ್ಕೃತರ ಕೃತಿಗಳ ಕುರಿತ ಲೇಖನಗಳಿರುವಂತೆಯೇ ಭಾರತೀಯರಾದ ಅಂಜುಂ ಹಸನ್, ಸೈರಸ್ ಮಿಸ್ತ್ರಿ. ಗೀತಾಂಜಲಿ ಶ್ರೀ. ಅಜಿತನ್ ಕುರುಪ್, ಹರೀಶ್ ಎಸ್ ಕೃತಿಗಳ ಕುರಿತ ಲೇಖನಗಳೂ ಇವೆ. ಇಬ್ಬರು ಮೂವರನ್ನು ಹೊರತು ಪಡಿಸಿದರೆ ಎಲ್ಲರೂ ಸಮಕಾಲೀನರೇ, ಈಗಲೂ ಬರೆಯುತ್ತಿರುವವರೇ. ಆಸ್ಟ್ರೇಲಿಯಾ, ಬಾಂಗ್ಲಾ, ಪ್ಯಾಲಸ್ತೇನ್, ಟರ್ಕಿ, ಫ್ರಾನ್ಸ್, ಜರ್ಮನಿ ಮುಂತಾಗಿ ವಿವಿಧ ದೇಶಗಳ ಲೇಖಕರು ಇರುವಂತೆಯೇ ಈಶಾನ್ಯ ಭಾರತ, ಮಹರಾಷ್ಟ್ರ, ಕೇರಳದ ಲೇಖಕರು ಇಲ್ಲಿದ್ದಾರೆ. ಇವೆಲ್ಲ ವಿವರಗಳಿಗಿಂತ ಮುಖ್ಯವಾದದ್ದು ಇಲ್ಲಿ ಉಲ್ಲೇಖಗೊಂಡಿರುವ ಕೃತಿಗಳೆಲ್ಲವೂ ಪ್ರತಿಯೊಬ್ಬರೂ ಓದಲೇ ಬೇಕಾದಂಥವು. ಬದುಕನ್ನು ಶ್ರೀಮಂತಗೊಳಿಸುವಂಥವು, ಸಾರ್ಥಕಗೊಳಿಸುವಂಥವು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ.
ನರೇಂದ್ರ ಪೈ ಅವರು ಕನ್ನಡದ ಖ್ಯಾತ ವಿಮರ್ಶಕರಲ್ಲಿ ಒಬ್ಬರು. ಸಾಹಿತ್ಯದ ಓದು- ಬರಹಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅವರು ಎರಡು ಕೃತಿಗಳನ್ನು ರಚಿಸಿದ್ದಾರೆ. ಅವರ ಹಲವಾರು ವಿಮರ್ಶಾ ಲೇಖನಗಳನ್ನು ಕನ್ನಡದ ಹಲವು ದೈನಂದಿನ ಪತ್ರಿಕೆ, ಮಾಸಿಕ ಮ್ಯಾಗಸೈನ್‌ಗಳಲ್ಲಿ ಪ್ರಕಟಗೊಂಡಿವೆ. ಕನ್ನಡದ ನೂರಾರು ಪುಸ್ತಕಗಳನ್ನು ವಿಮರ್ಶಿಸಿ ಪರೋಕ್ಷವಾಗಿ ಲೇಖಕರನ್ನು ತಿದ್ದುವ ಕೆಲಸ ಮಾಡಿದ್ದು, ಈ ಸಲುವಾಗಿ ‘ಟಿಪ್ಪಣಿಪುಸ್ತಕ’ ಎಂಬ ಬ್ಲಾಗ್ ತೆರೆದಿದ್ಧಾರೆ. ಅವರ ಎಲ್ಲಾ ವಿಮರ್ಶಾ ಲೇಖನಗಳನ್ನು ಅವರ ಬ್ಲಾಗ್ ನಲ್ಲಿಯೂ ಓದಬಹುದಾಗಿದೆ. ...
READ MORE