`ವಿಮರ್ಶೆಯ ಹೊಳೆ ಸಂಪುಟ-1’ ಕೃತಿಯು ಮಾಧವ ಕುಲಕರ್ಣಿ ಅವರ ಕಾವ್ಯ ಹಾಗೂ ವಿಮರ್ಶಾ ಸಂಕಲನವಾಗಿದೆ. ಈ ಕೃತಿಯಲ್ಲಿ ಮಾಧವ ಕುಲಕರ್ಣಿ ಅವರು ಬೇರೆ ಬೇರೆ ಪತ್ರಿಕೆಗಳಿಗೆ, ನಿಯತಾಕಾಲಿಕೆಗಳಿಗೆ ಹಾಗೂ ಗ್ರಂಥಗಳಿಗೆ ಬರೆದಿರುವ ವಿಮರ್ಶೆಗಳಿವೆ. ಕನ್ನಡ ಕಾದಂಬರಿ ಪ್ರಪಂಚದ ಮೌಲ್ಯ ಮಾಪನ ಪ್ರಕ್ರಿಯೆಯಲ್ಲಿ ಇದೊಂದು ಐತಿಹಾಸಿಕ ದಾಖಲೆಯಾಗಿದೆ. ವಿ.ಕೃ. ಗೋಕಾರರ ಸಮರಸವೇ ಜೀವನ, ಅನಂತಮೂರ್ತಿ ಅವರ ಎರಡು ಕಾದಂಬರಿಗಳು ಇಲ್ಲಿ ವಿಮರ್ಶೆಗೆ ಒಳಪಟ್ಟಿದೆ. ನಾ. ಮೊಗಸಾಲೆಯವರ ಉಲ್ಲಂಘನೆ, ಮುಖಾಂತರ, ಹನೂರರ ಅಜ್ಞಾತನೊಬ್ಬನ ಆತ್ಮಚರಿತ್ರೆ, ಶ್ರೀನಿವಾಸ ವೈದ್ಯರ ಹಳ್ಳ ಬಂತು ಹಳ್ಳ ಬಿ. ಜನಾರ್ಧನ ಭಟ್ ಅವರ ಉತ್ತರಾಧಿಕಾರ ಮೊದಲಾದ ಕಾದಂಬರಿಗಳನ್ನು ಮಾಧವ ಕುಲಕರ್ಣಿ ಅವರು ವಿಮರ್ಶೆಗೊಳಪಡಿಸಿದ ರೀತಿ ಅನನ್ಯವಾಗಿದೆ.
ಲೇಖಕ, ವಿಮರ್ಶಕ ಮಾಧವ ಕುಲಕರ್ಣಿ ಅವರು ಈಗಿನ ಗದಗ ಜಿಲ್ಲೆ ಮತ್ತು ಆಗಿನ ಧಾರವಾಡ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಅವರು ಹೈಸ್ಕೂಲು ಶಿಕ್ಷಣವನ್ನು ವಿದ್ಯಾದಾನ ಸಮಿತಿ ಹೈಸ್ಕೂಲು ಗದಗದಲ್ಲಿ ಪೂರ್ಣಗೊಳಿಸಿದ್ದಾರೆ. ತಂದೆ ಎ.ವಿ. ಕುಲಕರ್ಣಿ ಗದುಗಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಲ್ಲದೇ ಹೈಸ್ಕೂಲು ಶಿಕ್ಷಣದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಎಸ್.ಎಸ್. ಅಯ್ಯಂಗಾರ್ ಅವರ ಆಡಳಿತ ಕ್ರಮ ಮತ್ತು ಶಿಸ್ತು ನನ್ನ ಮೇಲೆ ಪ್ರಭಾವ ಬೀರಿದವು ಎನ್ನುತ್ತಾರೆ ಮಾಧವ ಕುಲಕರ್ಣಿ. ಗದುಗಿನ ಜೆ.ಟಿ. ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ...
READ MORE