ಯುಗದ ಕವಿ ಬೇಂದ್ರೆ

Author : ಯು.ಆರ್. ಅನಂತಮೂರ್ತಿ

Pages 52

₹ 40.00




Year of Publication: 2013
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಅಭಿನವ ಪ್ರಕಾಶನದ ಸರಸ್ವತಿ ನೆನಪು ಮಾಲಿಕೆಯಲ್ಲಿ ಪ್ರಕಟವಾದ ಕೃತಿ ’ ಯುಗದ ಕವಿ ಬೇಂದ್ರೆ’.

ತಮ್ಮ ಕಾಲದಲ್ಲಿ ತನಗೆ ಹೇಳಬೇಕಾದ್ದನ್ನು ಹೇಳಬೇಕಾದ ರೀತಿಯಲ್ಲಿ ಬೇರೆಯವರಿಗೆ ಕೇಳುವ ಹಾಗೆ ಹೇಳಬಲ್ಲವರು ಅನಂತಮೂರ್ತಿ ಅವರು. ಕಾದಂಬರಿ, ಕಾವ್ಯ, ಕಥೆ, ವಿಮರ್ಶೆ, ಚಿಂತನೆ, ಮಾತು ಯಾವುದೇ ಇರಲಿ. ಅವರ ಬರವಣಿಗೆಗೆ ಅವರದೇ ಸ್ಫಟಿಕ ಸ್ಪರ್ಶ, ಕಾಮನಬಿಲ್ಲಿನ ಬಣ್ಣ ಜೊತೆಗೆ ಸೂರ್ಯಸ್ವಷ್ಟ ನಿಖರತೆಯೂ, ಋತು ನಿರಂತರತೆಗಳೂ ಇವೆ. 

ಬೇಂದ್ರೆಯವರ ವ್ಯಕ್ತಿತ್ವ ಮತ್ತು ಶಕ್ತಿಯನ್ನು ಗುರುತರವಾಗಿ ಕಾಣುವ ಮತ್ತು ಕಾಣಿಸುವ ಪ್ರಯತ್ನವನ್ನು ಅನಂತಮೂರ್ತಿಯವರು ಈ ಕೃತಿಯಲ್ಲಿ ಮಾಡಿದ್ದಾರೆ. ಅವರದೇ ಮಾತುಗಳಲ್ಲಿ ಹೇಳುವುದಾದರೇ, ಕಾವ್ಯದ ಸೃಜನಶೀಲತೆಯ ಸ್ವರೂಪ, ಅದರ ಬಿಗಿ, ಅದರ ಸ್ಪರ್ಷ, ಅದು ತರುವ ಏಕಾಗ್ರತೆಯ ಸುಖ, ಪ್ರೇಮಕ್ಕೂ ಅದಕ್ಕೂ ಇರುವ ನಂಟು, ಅದರ ಮಣ್ಣನ್ನು ಮಾತ್ರ ಗರ್ಭೀಕರಿಸಿಕೊಳ್ಳುವ ಆಕಾಶ, ಈ ಮಣ್ಣನ್ನು ಹದದಲ್ಲಿಡುವ ಸಮೃದ್ದ ಅನುಭವದ ಜನಜೀವನ - ಇವೆಲ್ಲವನ್ನು ತೀವ್ರವಾಗಿ ಅನುಭವಿಸಿದ್ದ ಬಹುದೊಡ್ಡ ಕವಿಯೆಂದರೆ ಬೇಂದ್ರೆ ಎಂಬ ಹಲವಾರು ಸಂಗತಿಗಳನ್ನು ಈ ಕೃತಿ ಒಳಗೊಂಡಿದೆ. 

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books