ಕನ್ನಡ ಸಾಹಿತ್ಯ ಲೋಕದಲ್ಲಿ ಸಣ್ಣಕತೆಗಳು ಸಾಗಿ ಬಂದಿರುವ ಹಾದಿಯನ್ನು ಸೂಚಿಸುವ ಮಹತ್ವಾಕಾಂಕ್ಷೆ ಈ ಬರಹದಲ್ಲಿದ್ದು ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ಸಮರ್ಥ ವಿಶ್ಲೇಷಣೆ ಈ ಪುಸ್ತಕದಲ್ಲಿದೆ.
ಪಂಜೆ ಮಂಗೇಶರಾಯರಿಂದ ಮೌನೇಶ ಬಡಿಗೇರ ವರೆಗೆ ಹಬ್ಬಿರುವ ಟಿ.ಪಿ.ಆಶೋಕ ಅವರ ಈ ವಿಮರ್ಶಾ ಕಥನದಲ್ಲಿ, ಹಲವು ಪೀಳಿಗೆಗಳ, ಪಂಥಗಳ, ಮನೋಧರ್ಮಗಳ ಹಲವು ಮುಖ್ಯ ಲೇಖಕರ ಪ್ರಸಿದ್ಧ ಕತೆಗಳ ಆಶಯ-ಆರೋಗ್ಯಕರ ಚರ್ಚೆಯನ್ನು ಕೃತಿಕಾರರು ಮಾಡಿದ್ಧಾರೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE