‘ಅನಾವರಣ’ ಲೇಖಕ ಜಬೀವುಲ್ಲಾ ಎಂ.ಅಸದ್ ಅವರು ರಚಿಸುವ ವಿಮರ್ಶಾ ಸಂಕಲನ. ಈ ಕೃತಿಗೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ..ಜಬೀವುಲ್ಲಾ ಎಂ. ಅಸದ್ ಬಹುಮುಖ ಪ್ರತಿಭೆಯ ಅಪರೂಪದ ಚಿಂತಕ. ಅವರೊಳಗೆ ಒಬ್ಬ ಕವಿ- ಒಬ್ಬ ಚಿತ್ರಕಾರ- ಒಬ್ಬ ವಿಮರ್ಶಕ ಇದ್ದಾನೆ. ಇದೊಂದು ಅಪರೂಪದ ಸಂಯೋಜನೆ, ಅದರೊಳಗೆ ಇವೆಲ್ಲಾ ಮುಪ್ಪುರಿಗೊಂಡು ಬರವಣಿಗೆಯಲ್ಲಿ 'ಅನಾವರಣ' ಗೊಳ್ಳುವ ಪರಿ ಅನನ್ಯವಾದುದು. ಈ ಸಂಗ್ರಹದ ಇಪ್ಪತ್ತೈದಕ್ಕೂ ಹೆಚ್ಚು ಲೇಖನಗಳು ಗಜಲ್ ಕುರಿತ ವಿಮರ್ಶೆಗಳೇ ಆಗಿದ್ದು, ಕನ್ನಡದ ಈ ಶಾಯರಿ ಲೋಕ ಇಷ್ಟೊಂದು ಸಮೃದ್ಧವೇ ಎಂದು ನಮ್ಮನ್ನು ಆಶ್ಚರ್ಯ ಸಂಭ್ರಮಗಳಲ್ಲ ಮುಳುಗಿಸುತ್ತದೆ. ಉರ್ದು ಮನೆ ಮಾತಿನ ಅಸದ್ ಅವರಿಗೆ ಗಜಲ್‌ಗಳ ಸೌಂದರ್ಯ, ಅದರೊಳಗೆ ಮಿತವಾಗಿರುವ ತತ್ವಜ್ಞಾನ, ಶೃಂಗಾರದ ಹಿಂದಿರುವ ರಸಿಕತೆಯೊಂದಿಗೆ ಆ ಕಾವ್ಯದ ನಾಡಿ ಮಿಡಿತವನ್ನು ಗ್ರಹಿಸಲು ಸಹಾಯಕವಾಗಿದೆ, ಶಾಂತರಸ, ಜಂಬಣ್ಣ ಅಮರಚಿಂತರಂಥ ಕವಿಗಳಿಂದ ಪ್ರಾರಂಭವಾದ ಈ ಗಜಲ್ ಪರಂಪರೆ ಇಂಥ ಸಮೃದ್ಧ ಫಸಲು ನೀಡಿರುವುದು ನಮ್ಮೆಯೇ ಸರಿ, ಇದರ ಸಮರ್ಥ ವಾರಸುದಾರರಂತಿರುವ ಮುಕ್ತಾಯಕನ್ನವರ, ಗಜಲ್ ಗಳು ಶಿವಶರಣರ ವಚನದ ಅನುಭಾವವೂ ಬೆರೆತಿರುವುದರಿಂದ ಅವರ ಕಾವ್ಯಕ್ಕೆ ಅಪೂರ್ವ ಶೋಭೆ ಪ್ರಾಪ್ತವಾಗಿದೆ. ವಿಮರ್ಶೆಯ ಉದ್ದಕ್ಕೂ ಇಂಥ ಅನೇಕ ಹೊಳಹುಗಳನ್ನು, ಒಳನೋಟಗಳನ್ನು ಅಸದ್ ರವರು ಗುರುತಿಸುವುದರಿಂದ ಅವರ ವಿಮರ್ಶೆ ಹೊಸ ಪ್ರಭೆಯಿಂದ ಕಂಗೊಳಿಸುತ್ತದೆ. ಇದರ ಜೊತೆಗ ಸ್ಥಳೀಯ ಇತಿಹಾಸ ಕುರಿತ ಅನೇಕ ಕೃತಿಗಳ ಕಡೆಗೆ ಅವರ ಗಮನವೂ ಹರಿದಿದೆ, ದುರುಗಸೀಮೆಯ ಅನೇಕ ತರುಣ ಕವಿಗಳ ಕವಿತೆಯನ್ನು ಸಹೃದಯತೆಯಿಂದ ಗ್ರಹಿಸುವ, ವಿಮರ್ಶೆಯ ಸ್ಪರ್ಶ ಪಡೆದ ಮುನ್ನುಡಿಗಳು ವಿಶಿಷ್ಠವಾಗಿವೆ. ಈ ಎಲ್ಲಾ ಬರಹಗಳು ಸೂಕ್ಷ್ಮ ಸಂವೇದಿಯಾದ ಕಲಾವಿದನ ಮನೆಯಲ್ಲಿ ಬಂದಿರುವುದರಿಂದ ವಿಭಿನ್ನವಾಗಿವೆ ಎಂದಿದ್ದಾರೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ.
ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ...
READ MORE