ಹಿರಿಯ ಕನ್ನಡ ವಿದ್ವಾಂಸರಾದ ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು ಬಗ್ಗೆ ಈ ಕೃತಿಯೂ ಮೂಡಿ ಬಂದಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ ಇವರು, ಕಾದಂಬರಿ, ಕನ್ನಡ ಸಂಸ್ಕೃತಿ, ಕಾವ್ಯ ಮೀಮಾಂಸೆ, ವಿಮರ್ಶಾ ಕ್ಷೇತ್ರಗಳಲ್ಲಿ ವಿಶೇಷವಾಗಿ ಬೆರಗು ಮೂಡಿಸಿದವರು. ಇವರ ವಿಮರ್ಶಾ ಬಿಡಿಬಿಡಿ ಲೇಖನಗಳು ಅಪ್ರಸ್ತುತತೆಯ ನೆಲೆಗೆ ಸರಿಯುವಂತವಲ್ಲ. ಅವುಗಳಿಗೆ ಅವುಗಳು ತಮ್ಮದೇ ಆದ ಪ್ರಸ್ತುತತೆ ಮತ್ತು ಮೌಲ್ಯಗನ್ನು ಹೊಂದಿವೆ. ವಿಮರ್ಶಾ ಪ್ರಪಂಚಕ್ಕೆ ದಿಕ್ಸೂಚಿಯಾಗಿ, ಅಡಿಹಾಸುವಾಗಿ ಅವು ತಮ್ಮನ್ನು ಸಮರ್ಪಿಸಿಕೊಳ್ಳುತ್ತವೆ. ಲೇಖಕಿ ಶೈಲಜ ಎಚ್.ಟಿ ಯವರು ತಿಪ್ಪೇರುದ್ರಸ್ವಾಮಿಯವರ ಹಲವು ವಿಮರ್ಶಾ ಲೇಖನಗಳನ್ನು ಸಂಪಾದಿಸಿ ಈ ಕೃತಿಯಲ್ಲಿ ಕೊಟ್ಟಿದ್ದಾರೆ.