‘ಹೊಸ ಓದು ಹೊಸ ನೋಟ’ ಉದಯಕುಮಾರ್ ಹಬ್ಬುಅವರ ವಿಮರ್ಶಾ ಸಂಕಲನವಾಗಿದೆ. ಇದಕ್ಕೆ ನಾ. ಮೊಗಸಾಲೆ ಅವರ ಬೆನ್ನುಡಿ ಬರಹವಿದೆ; ವಿಮರ್ಶೆ ಮತ್ತು ತತ್ವಚಿಂತನೆಗಳಲ್ಲಿ ವಿಶೇಷ ಶ್ರದ್ದೆ ಮತ್ತು ಪರಿಶ್ರಮವುಳ್ಳ ಉದಯಕುಮಾರ್ ಹಬ್ಬು ಅವರ ಬುದ್ದ ಮತ್ತು ಬಸವಣ್ಣನ ಕುರಿತು ತಾತ್ವಿಕ ಕೃತಿಗಳನ್ನು ಹೊರತಂದಿದ್ದಾರೆ. 'ಭಾರತೀಯ ತತ್ವದರ್ಶನ' ಎನ್ನುವುದು ಇವರ ಚಿಂತನೆಯು ಹರಳುಗಟ್ಟಿದ ಇನ್ನೊಂದು ರಚನೆ. ವಿಸ್ತ್ರತ ಓದು ಮತ್ತು ಅದನ್ನು ಮೀರುವಂತೆ ಬರೆಯುತ್ತಲೇ ಇರುವ ಅವರ "ಬಹುರೂಪಿ" ಬರಹಗಳು ವಿಮರ್ಶಾ ಪುಸ್ತಕಗಳಾಗಿ ಹೊರ ಬರುತ್ತಿವೆ. ಇದರಲ್ಲಿ ಕನ್ನಡ, ಮಲೆಯಾಳಂ, ಇಂಗ್ಲಿಷ್, ರಷ್ಯನ್ ಭಾಷೆಗಳಲ್ಲಿನ ಕತೆ, ಕಾದಂಬರಿ, ಕಾವ್ಯಗಳು ಒಟ್ಟೂ ನೂರಕ್ಕೆ ಮಿಕ್ಕಿ ಕೃತಿಗಳು ಅವಲೋಕನ ಮತ್ತು ವಿಮರ್ಶೆಗೊಳಪಟ್ಟಿವೆ. ಓದು ಕೇವಲ ಓದಿಗಾಗಿ ಮಾತ್ರವಲ್ಲ, ಅಧ್ಯಯನಕ್ಕೂ ಇರಬೇಕೆನ್ನುವಂತೆ ಬದುಕುತ್ತಿರುವ ಅವರು ತಾವು ಓದಿದ್ದನ್ನು ಇನ್ನೊಬ್ಬರೂ ಓದಬೇಕೆಂಬ ಖುಷಿಯಲ್ಲಿ ಈ ಕೃತಿಯನ್ನು ಹೊರ ತರುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ಮುಖ್ಯ ಸಂವೇದನೆಯಾದ 'ಬಹುಭಾಷಾ ಸರಸ್ವತಿ' ಯ ಅರಾದಕರಾಗಿರುವ ಹಬ್ಬು ಅವರು ಪ್ರತಿ ಭಾಷೆಯೂ ಇನ್ನೊಂದು ಭಾಷೆಯಿಂದ ಪಡೆಯಬೇಕು ಮತ್ತು ಕೊಡಬೇಕು ಮತ್ತು ಅದಕ್ಕೆ ತನ್ನದನ್ನೂ ಕೊಡಬೇಕು ಎನ್ನುವುದಕ್ಕೆ ತನ್ನ ಮನಸ್ಸನ್ನು ರೂಪಕವಾಗಿಟ್ಟುಕೊಂಡ ಚಿಂತಕರು. ಈ ನೆಲೆಯಲ್ಲಿ ಇದೊಂದು ಅಪರೂಪದ ಮತ್ತು ಮಹತ್ವದ ಕೃತಿ ಎನ್ನಬಹುದು.
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MORE