ಸಾಹಿತ್ಯದ ವಿವಿಧ ಪರಿಭಾಷೆಗಳನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ’ಸಾಹಿತ್ಯ ಪಾರಿಭಾಷಿಕ ಮಾಲೆ’ಯೊಂದನ್ನು ತೊಂಬತ್ತರ ದಶಕದಲ್ಲಿ ಹೊರತಂದಿತ್ತು. ಸಾಂಸ್ಕೃತಿಕ ಸಂಶೋಧನೆ, ಮಾಂತ್ರಿಕ ವಾಸ್ತವತೆ, ಪ್ರಜ್ಞಾ ಪ್ರವಾಹ ತಂತ್ರದಂತಹ ವಿವಿಧ ವಿಷಯಗಳ ಮೇಲೆ ಲೇಖಕರು ಸಂಶೋಧಕರು, ವಿಮರ್ಶಕರಿಂದ ಕೃತಿಗಳನ್ನು ಬರೆಸಲಾಗಿತ್ತು. ಇದು ಪರಿಷ್ಕೃತ ಮುದ್ರಣ.
ವಿಮರ್ಶಕ ಟಿ.ಪಿ. ಅಶೋಕ ಬರೆದಿರುವ ’ವಾಸ್ತವತಾವಾದ’.
ವಾಸ್ತವವಾದದ ಪರಿಕಲ್ಪನೆ, ಅದು ಉದಯಿಸಿದ ಹಿನ್ನೆಲೆ, ಇಂಗ್ಲಿಷ್ ಮತ್ತು ಕನ್ನಡ ಸಂದರ್ಭದಲ್ಲಿ ಅದು ಚಾಚಿಕೊಂಡಿರುವ ಬಗೆಯನ್ನು ಕೃತಿ ಚರ್ಚಿಸುತ್ತದೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE