‘ತುಂಬಿ ಬಂದಿತ್ತ ಬೇಂದ್ರೆ ಕಾವ್ಯದ ಅಧ್ಯಯನ’ ನರಸಿಂಹ ಮೂರ್ತಿ ಹೂವಿನಹಳ್ಳಿ ಅವರ ಕೃತಿಯಾಗಿದೆ. ಕನ್ನಡದ ಬಹುದೊಡ್ಡ ಕವಿ ದ.ರಾ. ಬೇಂದ್ರೆಯವರ ಕವಿತೆಗಳನ್ನು ಈ ಪುಸ್ತಕದಲ್ಲಿ ಆಳವಾದ ಅಧ್ಯಯನಕ್ಕೆ, ಚರ್ಚೆಗೆ ಒಳಪಡಿಸಲಾಗಿದೆ. ಓದುಗರು, ವಿಮರ್ಶಕರು, ಕನ್ನಡದ ಲೇಖಕರು, ಲೇಖಕಿಯರು ಇಲ್ಲಿ ಚರ್ಚಿಸಿರುವ ಪದ್ಯಗಳ ಬಗ್ಗೆ ಇನ್ನೂ ಹೊಸ ಹೊಸ ವಿಚಾರಗಳನ್ನು ಚರ್ಚಿಸಿ ಬೆಳೆಸಬಹುದು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಸಂಶೋಧಕರಿಗೆ, ಸಂಶೋಧಕಿಯರಿಗೆ ನೆರವಾಗಲೆಂದು ಬೇಂದ್ರೆಯವರ ಪದ್ಯಗಳ ಬಗ್ಗೆ ಬರೆದವರ ಅಭಿಪ್ರಾಯಗಳನ್ನುಈ ಅಧ್ಯಯನಕ್ಕೆ ಪೂರಕವಾಗುವಂತೆ ಬಳಸಿಕೊಳ್ಳಲಾಗಿದೆ.
ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ...
READ MORE