ಕೆ ಎಸ್ ನ ಆವರ ಕಾವ್ಯದ ಬೆಳವಣಿಗೆಯ ಚರಿತ್ರೆ ಹಾಗೂ ಸತ್ವವನ್ನು ಗುರುತಿಸುತ್ತಲೇ ಅವರ ಅನೇಕ ಮುಖ್ಯ ಕವಿತೆಗಳ ಸೂಕ್ಷ್ಮ ವಿಶ್ಲೇಷಣೆಯನ್ನೂ ನರಹಳ್ಳಿಯವರು ಇಲ್ಲಿ ಮಾಡಿದ್ದಾರೆ. 'ಇಹದ ಪರಿಮಳದ ಹಾದಿ’ ನರಹಳ್ಳಿಯವರ ವಿಮರ್ಶಾಶಕ್ತಿಗೆ ಸಾಕ್ಷಿ.
ತಮ್ಮ ವಿಶಿಷ್ಟ ಪ್ರತಿಭೆಯಿಂದ ಕಾವ್ಯವನ್ನು ಜನರ ಬದುಕಿನಲ್ಲಿ ಒಂದಾಗಿಸುವ ಮೂಲಕ ಆಧುನಿಕ ಕಾವ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಕೆ ಎಸ್ ನರಸಿಂಹಸ್ವಾಮಿಯವರ ಕಾವ್ಯದ ಅಧ್ಯಯನ ಇದುವರೆಗೆ ನಡೆದಿರಲಿಲ್ಲ, ನರಹಳ್ಳಿ ಬಾಲಸುಬ್ರಹ್ಮಣ್ಯ ಕನ್ನಡ ವಿಮರ್ಶೆಯ ಅಗತ್ಯವೊಂದನ್ನು ಸಮರ್ಥವಾಗಿ ಈಡೇರಿಸಿಕೊಟ್ಟಿದ್ದಾರೆ. ಲೇಖಕರು ತಮ್ಮ ನಿಲುವನ್ನು ಸ್ಪಟಿಗೊಳಿಸಲು ನಡೆಸುವ ಚರ್ಚೆ, ವಿಶ್ಲೇಷಣೆ, ಪ್ರತಿಪಾದನೆ ಸಮರ್ಥವೂ, ಉನ್ನತ ಮಟ್ಟದ್ದಾಗಿದ್ದು ಆನಗತ್ಯವೆನಿಸುವ ಯಾವ ಮಾತುಗಳನ್ನೂ ಬಳಸದ ಇವರ ಶೈಲಿ ಸ್ಪಟಿಕದಂತೆ ಸ್ವಚ್ಚವಾಗಿದೆ, ಒಬ್ಬ ಸಮಕಾಲಿನ ಕವಿಯನ್ನು ಕುರಿತ ಅಧ್ಯಯನ ಹೇಗಿರಬೇಕು ಎಂಬುದಕ್ಕೆ ಇದೊಂದು ಮಾದರಿ.
ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...
READ MORE