ಲೇಖಕ ಡಾ. ಎನ್. ಎಂ. ಗಿರಿಜಾಪತಿ ಅವರ ಕೃತಿ ʻಕೇಶಿರಾಜನ ಶಬ್ದಮಣಿದರ್ಪಣʼ- ಸರಳ ಮಾದರಿ ಪದವಿಭಾಗ ಮತ್ತು ವಿವರಣೆ ಸಹಿತʼ. ಪುಸ್ತಕದಲ್ಲಿ ಲೇಖಕರು, “ತನ್ನ ಸಮಕಾಲೀನ ಮತ್ತು ಅದುವರೆವಿಗಿನ ಕನ್ನಡಂಗಳ ಪ್ರಯೋಗವನ್ನು ಆಧರಿಸಿ ರೂಪಿಸಿದ ಕೇಶಿರಾಜ ತನ್ನ ಈ ಕೃತಿಯಲ್ಲಿ ಹಳೆಗನ್ನಡ, ನಡುಗನ್ನಡ ಮತ್ತು ಉಪಭಾಷೆಗಳ ವೈಶೇಷಿಕತೆಗಳನ್ನು ಕಟ್ಟಿಕೊಡುವ ಕ್ರಮವೇ ಹಲವು ಬಗೆಯ ಕನ್ನಡದ ಮಾದರಿಗಳನ್ನು ಗ್ರಹಿಸುವ ಕ್ರಮಗಳಿಗೂ ಕೈಪಿಡಿಯಂತಿದೆ. ಶಬ್ದಮಣಿದರ್ಪಣ ಕೃತಿಗೆ ಅದರ ಸಂಪಾದನೆ, ಮರುಸಂಪಾದನೆ, ಪರಿಷ್ಕರಣೆ, ಪ್ರಕಟಣೆಯ ಚರಿತ್ರೆಯನ್ನು ನಾವು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರವೆಂದು ಗುರುತಿಸಿ ಸಂಶೋಧನೆ ಮಾಡಿ ನೋಡಬಹುದಾದಷ್ಟು ವ್ಯಾಪ್ತಿಗಳಿವೆ. ಈ ಕೃತಿ ಕನ್ನಡ ಭಾಷೆ ಮತ್ತು ವ್ಯಾಕರಣಪರಂಪರೆಯ ಆಚಾರ್ಯ ಕೃತಿ. ಇದಕ್ಕೆ ಮುಖ್ಯ ಕಾರಣಗಳನ್ನು ಎರಡು ನೆಲೆಗಳಲ್ಲಿ ಗುರುತಿಸಿದ್ದೇನೆ. ಮೊದಲನೆಯದು ಹೊಸಗನ್ನಡ ರೂಪದ ಕನ್ನಡ ಭಾಷೆಯ ವಾಕ್ ಮತ್ತು ಲಿಪಿ ರೂಪ, ಸ್ವರೂಪ ಮತ್ತು ವ್ಯಾಕರಣ ಪ್ರಯೋಗಗಳ ಗ್ರಹಿಕೆಗೆ ಆಕರವಾಗಿರುವುದು. ಮತ್ತೊಂದು ಇದುವರೆಗೆ ರೂಪಗೊಂಡ ಹಳೆಗನ್ನಡ ಮತ್ತು ನಡುಗನ್ನಡದಲ್ಲಿನ ಕನ್ನಡ ಸಾಹಿತ್ಯ ಕೃತಿಗಳನ್ನು ಓದಿಗೆ ಬರಮಾಡಿಕೊಳ್ಳುವಲ್ಲಿ ಇರಬೇಕಾದ ಅಂದಂದಿನ ಕಾವ್ಯಭಾಷಾ ಪ್ರಜ್ಞೆ, ಪದಗಳ ಸ್ವರೂಪ, ಪ್ರಯೋಗ ವಿಧಾನ, ತಂತ್ರ, ಶೈಲಿ, ಇತ್ಯಾದಿಗಳನ್ನು ತಿಳಿಯುವಲ್ಲಿ ಆಧಾರವಾಗಿರುವುದು” ಎಂದು ಹೇಳಿದ್ದಾರೆ.
ಡಾ. ಎನ್.ಎಂ. ಗಿರಿಜಾಪತಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಡಿಸೆಂಬರ್ 17, 1966ರಲ್ಲಿ ಜನಿಸಿದರು. ತಂದೆ ದಿ. ಎನ್. ಎಂ. ಸೋಮಶೇಖರಯ್ಯ ಶಾಸ್ತ್ರಿ, ತಾಯಿ ಶ್ರೀಮತಿ. ವಿಶಾಲಾಕ್ಷಮ್ಮ. ಇವರು ಕನ್ನಡದಲ್ಲಿ ಎಂ.ಎ, ಬಿ.ಈಡಿ ಮತ್ತು ಪಿ.ಹೆಚ್.ಡಿ ವ್ಯಾಸಂಗ ಮಾಡಿದ್ದಾರೆ. ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಗಿರಿಜಾಪತಿ ಅವರು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ಗುಂಡ್ಲುಪೇಟೆಯಲ್ಲಿರುವ ಜೆ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿನ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಪಿಹೆಚ್‌ಡಿ ...
READ MORE