ಒಮ್ಮುಖ

Author : ಜಿ.ಎಸ್. ಆಮೂರ

Pages 200

₹ 144.00




Year of Publication: 2016
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ ರಸ್ತೆ, ಹುಬ್ಬಳ್ಳಿ-580020
Phone: 09448110034

Synopsys

ಕವಿ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ಅವರ ವಾಙ್ಮಯದಲ್ಲಿ ತತ್ವ ಹಾಗೂ ಕಾವ್ಯದ ಅನುವಾದ ಕುರಿತು ವಿಮರ್ಶಕ ಜಿ.ಎಸ್. ಆಮೂರ ಅವರು ಬರೆದ ಕೃತಿ-ಒಮ್ಮುಖ. ಬೇಂದ್ರೆ ಅವರ ಕಾವ್ಯಗಳಲ್ಲಿ ಅವರದೇ ಆದ ತಾತ್ವಿಕ ವಿಚಾರಗಳ ಪಾಲು ಎಷ್ಟಿದೆ. ತಾತ್ವಿಕ ವಿಚಾರಗಳು ಅವರ ಜೀವನವನ್ನು ನಿರ್ದೇಶಿಸಿದ ಬಗೆ, ತತ್ವಗಳಲ್ಲಿ ನಂಬುಗೆಯ ಬೆರೆತ ಪರಿ ಕುರಿತು ಕಾವ್ಯದಲ್ಲಿ ಅವುಗಳ ಹಾಸುಹೊಕ್ಕು, ಕಾವ್ಯದಲ್ಲಿ ತತ್ವಗಳನ್ನು ಹೆಣೆಯುವ ಕುಸುರಿ ತಂತ್ರ ಇತ್ಯಾದಿ ಆಯಾಮಗಳನ್ನು ಲೇಖಕರು ವಿಮರ್ಶೆಯ ಚೌಕಟ್ಟಿನಲ್ಲಿರಿಸಿ ವಿಶ್ಲೇಷಿಸಿದ್ದು, ಬೇಂದ್ರೆ ಕಾವ್ಯದ ಅಂದ ಹಾಗೂ ಆರ್ಥವಂತಿಕೆಯನ್ನು ಹೆಚ್ಚಿಸಿದ್ದಾರೆ.

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books