ದನಿಯಿಲ್ಲದವರ ದನಿ

Author : ಶಿವರಾಮಯ್ಯ

Pages 80

₹ 75.00




Year of Publication: 2003
Published by: ಶಕ್ತಿ ಪ್ರಿಂಟರ್‍ಸ್ ಆಂಡ್ ಪಬ್ಲಿಷರ್‍ಸ್
Address: ನಂ.277, 5ನೇ ಅಡ್ಡರಸ್ತೆ, ವಿಧಾನ ಸೌಧ ಬಡಾವಣೆ, ಬೆಂಗಳೂರು. 560085

Synopsys

ವಿಶ್ವ ಮಾರುಕಟ್ಟೆಯ ಉದಾರೀಕರಣ ನೀತಿಯಿಂದ ಜಗತ್ತಿನ ಆರ್ಥಿಕ ವಹಿವಾಟು ವಿಸ್ತರಣೆ ಅದಲು ಬದಲಾಗಿ ಜನ ಕಂಗಾಲಾಗುತ್ತಿದ್ದಾರೆ. ಈ ಗಡಿಬಿಡಿಯಲ್ಲಿ ಹೆಚ್ಚು ಸಂಕಷ್ಟಕ್ಕೆ ಒಳಗಾಗುವವರೆಂದರೆ ರೈತರು, ಕಾರ್ಮಿಕರು, ದಲಿತರು, ಆದಿವಾಸಿ ಬುಡಕಟ್ಟುಗಳು, ಹೆಂಗಸರು ಮಕ್ಕಳು ಇತ್ಯಾದಿ. ಬಡತನದೊಂದಿಗೆ ತಳುಕು ಹಾಕಿಕೊಂಡೇ ಮತಾಂಧತೆ, ಭಯೋತ್ಪಾದನೆ, ಕೋಮುವಾದ ಮುಂತಾದ ಚಟುವಟಿಕೆಗಳು ವಿಜೃಂಭಿಸುತ್ತ ಬಲಿ ಬೇಡುತ್ತಿವೆ. ಈ ಆತಂಕಗಳನ್ನು ಹೇಳುತ್ತಲೇ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತದೆ ಕೃತಿ.

ಇಲ್ಲಿರುವ ಬಹುಪಾಲು ಲೇಖನಗಳು ನಮ್ಮ ನಾಡು, ಜನವಾಹಿನಿ ಮುಂತಾದ ಏನಪತ್ರಿಕೆಗಳಲ್ಲಿ, ಹೊಸತು, ಜನಪರ ಕರ್ನಾಟಕ ಮುಂತಾದ ನಿಯತ ಕಾಲಿಕೆಗಳಲ್ಲಿ ಬೆಳಕು ಕಂಡಿವೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books