ವಿಮರ್ಶಾ ಲೇಖನಗಳ ಸಂಕಲನ. ಈ ಗ್ರಂಥದಲ್ಲಿ 20 ವಿಮರ್ಶಾ ಲೇಖನಗಳಿವೆ. ಪುಸ್ತಕದ ಶೀರ್ಷಿಕೆಯನ್ನೇ ಒಳಗೊಂಡ ಬರಹ ಮೊದಲನೆಯದ್ದಾಗಿದೆ. ಓದುಗ-ಬರಹಗಾರ: ಕೆಲವು ಟಿಪ್ಪಣಿಗಳು, ಓದುವುದು ಅಂದರೆ, ದಂತಗೋಪುರ ಮಾರುಕಟ್ಟೆ ಮತ್ತು ರಾಜಕೀಯ, ಲೋಕಾಯತ, ಕನ್ನಡ ಕಾವ್ಯ ಸಂದರ್ಭ ಮತ್ತು ಎಲಿಯಟ್ ಕಾವ್ಯ ಬರಹಗಳು ಲೇಖನಗಳು ಸಾಹಿತ್ಯಕ -ಸಾಂಸ್ಕೃತಿಕ ಚರ್ಚೆ ನಡೆಸುತ್ತವೆ. ಕವಿ- ಪುಸ್ತಕ ಕುರಿತ ವಿಮರ್ಶಾ ಬರಹಗಳು ಕೂಡ ಗ್ರಂಥದಲ್ಲಿವೆ. ವಡ್ಡಾರಾಧನೆ: ಆಧುನಿಕ ಓದು, ಜನ್ನನ ಕೃತಿಗಳಲ್ಲಿ ಕಾಮ,ಪ್ರೇಮ ಮತ್ತು ದಾಂಪತ್ಯ ಬರಹಳ ಹಳಗನ್ನಡ-ನಡುಗನ್ನಡ ಪಠ್ಯಗಳನ್ನು ಕುರಿತಾಗಿವೆ. ಶಂ.ಬಾ. ಅವರ ಸಾಂಸ್ಕೃತಿಕ ಅಧ್ಯಯನ: ಒಂದು ಪರಿಚಯ, ಕಣವಿಯವರ ಸುನೀತಗಳು, ಕುಸುಮಬಾಲೆ ನಿರಚನ ಓದು, ಜಿ.ಎಸ್.ಎಸ್.- ಪರಿವರ್ತನೆಗಳ ಸಂಧಿಭೂಮಿ, ರಾಮಚಂದ್ರಶರ್ಮರ ಕಾವ್ಯ, ಕುಂ.ವೀ. ಅವರ ಶಾಮಣ್ಣ ಮತ್ತು ಯಾಪಿಲ್ಲು, ಮೊಗಳ್ಳಿಯವರ ‘ಭೂಮಿ’ ಹಾಗೂ ಡಿ.ಆರ್. ನಾಗರಾಜರ ‘ಶಕ್ತಿ ಶಾರದೆಯ ಮೇಳ’ ಕುರಿತ ವಿಮರ್ಶಾತ್ಮಕ ಒಳನೋಟಗಳಿವೆ. ಡಿ.ಆರ್. ನಾಗರಾಜ್: ಒಂದು ನೆನಪು ಎಂಬ ಬರಹ ಕೂಡ ಈ ಸಂಕಲನದಲ್ಲಿದೆ.
ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...
READ MORE