ಕವಿ ಶ್ರೀ ಅರವಿಂದರ ಮಹಾಕಾವ್ಯವಾದ ’ಸಾವಿತ್ರಿ’ಯನ್ನು ಕನ್ನಡ ಓದುಗರಿಗೆ ಪರಿಚಯಿಸುವ ದೃಷ್ಟಿಯಿಂದ ರಚಿಸಲಾಗಿರುವ ಕೃತಿಯಿದು. ಆಧ್ಯಾತ್ಮ ಸಾಧಕ, ತತ್ವಜ್ಞಾನಿಯಾಗಿದ್ದ ಅರವಿಂದರು ಮಹಾಭಾರತದ ಅರಣ್ಯ ಪರ್ವದಲ್ಲಿ ಬರುವ ಸಾವಿತ್ರಿ ಉಪಾಖ್ಯಾನವನ್ನು ಆಧರಿಸಿ ಈ ಮಹಾಕಾವ್ಯ ರಚಿಸಿದ್ದಾರೆ. ಕತೆಯನ್ನು ಮಹಾಕಾವ್ಯದ ವಿಸ್ತಾರ ಮತ್ತು ಮಹತ್ತಿಗೆ ಏರಿಸಲು ಅರವಿಂದರಂತಹ ಮಹಾನ್ ಪ್ರತಿಭೆಗೇ ಸಾಧ್ಯ. ಈ ಕಾವ್ಯದ ಸ್ವರೂಪ, ಆಶಯ, ಕಥಾಸಾರ, ತತ್ವದೃಷ್ಟಿಯನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲಿ ಜನಿಸಿದ ಉ.ಕಾ. ಸುಬ್ಬರಾಯಾಚಾರ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಅವರಿಗೆ ವೈದಿಕ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇತ್ತು. ವಾಲ್ಮೀಕಿ ರಾಮಾಯಣ (ವಿಮರ್ಶೆ), ಚಿತ್ರಾಂಗದ (ವಿಮರ್ಶೆ), ಕಂಬರಾಮಾಯಣ ಕಥಾಸಂಗ್ರಹ, ಕುಶಧ್ವಜ (ನಾಟಕಗಳು), ಶ್ರೀರಾಮಕಷ್ಟ ಪರಮಹಂಸ (ಜೀವನಚರಿತ್ರೆ), ರಾಮಾಯಣೀಕಥಾ (ಬಂಗಾಳಿಯಿಂದ ಅನುವಾದ) ಅವರ ಪ್ರಕಟಿತ ಕೃತಿಗಳು. ...
READ MORE