ಹೈದರಾಬಾದ್ ಕರ್ನಾಟಕ ಭಾಗದ ಹೆಸರಾಂತ ಲೇಖಕರಾದ ಶ್ರೀಸಿದ್ಧರಾಮ ಹೊನ್ಕಲ್ ಅವರ ಒಟ್ಟು ಮೂರು ಕಥಾ ಸಂಕಲನಗಳನ್ನು ಆಧರಿಸಿ ಮಾನಯ್ಯ ಬಿ. ಗೋನಾಲ ಅವರು ಸಾಹಿತ್ಯ ಸಮೀಕ್ಷಾ ಕೃತಿ ರಚಿಸಿದ್ದಾರೆ. ಸಿದ್ಧರಾಮ ಹೊನ್ಕಲ್ ಅವರ ಕಥೆ ಕೇಳು ಗೆಳೆಯಾ, ಬಯಲ ಬಿತ್ತನೆ, ನೆಲದ ಮರೆಯ ನಿಧಾನ ಈ ಮೂರು ಸಂಕಲನದಲ್ಲಿ ಒಟ್ಟು ಇಪ್ಪತ್ತೈದು ಬಹು ಮುಖ್ಯವಾದ ಕಥೆಗಳನ್ನು ಕನ್ನಡ ಸಾಹಿತ್ಯದ ಕಥಾ ಪರಂಪರೆಯಲ್ಲಿಟ್ಟು ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ.
ಮಾನಯ್ಯ ಬಿ. ಗೋನಾಲ ಮೂಲತಃ ಸುರಪುರ ತಾಲೂಕಿನ ಶಾಂತಪುರದವರು. ಸೊಂಡೂರು ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ, ಎಂ.ಫಿಲ್ ಪದವಿ ಪೂರೈಸಿದವರು. ಸದಾ ಅಧ್ಯಯನಶೀಲರಾಗಿದ್ದ ಮಾನಯ್ಯ ಅನಿವಾರ್ಯ ಸಂದರ್ಭದಲ್ಲಿ ಹುಟ್ಟೂರಿಗೆ ಮರಳಿ, ಅಲ್ಲಿಯೇ ಕೃಷಿಯಲ್ಲಿ ತೊಡಗಿಕೊಂಡವರು. ಕೃಷಿ ಬದುಕಿನ ನಡುವೆಯೂ ಓದುವ, ಒಂದಷ್ಟು ಬರೆಯುವ ಹವ್ಯಾಸವಿಟ್ಟುಕೊಂಡ ಮಾನಯ್ಯ ಸಾಹಿತ್ಯ ಕೃಷಿಗೂ ಕೆಲ ಸಮಯ ಮೀಸಲಿಟ್ಟ ಫಲವಾಗಿ ‘ಹೊನ್ಕಲ್ ರ ಕಥಾಲೋಕ’ ಕೃತಿ ಪ್ರಕಟಗೊಂಡಿದೆ. ...
READ MORE