ಹನಿಗವನಗಳ ಸಾಹಿತಿ ಎಚ್. ಡುಂಡಿರಾಜ್ ಅವರ ಸಾಹಿತ್ಯ ಸೌರಭ ಕುರಿತು ಡಾ. ಎಚ್.ಎಸ್. ಸತ್ಯನಾರಾಯಣ ಹಾಗೂ ಎಸ್. ರಾಮನಾಥ ಸಂಪಾದಕತ್ವದಲ್ಲಿ ವಿಮರ್ಶೆಗೆ ಒಳಪಡಿಸಿದ ಲೇಖನಗಳ ಸಂಗ್ರಹ ಕೃತಿ-ದುಂಡಿ ಮಲ್ಲಿಗೆ. ಕವನ ಇಲ್ಲವೇ ಲೇಖನ ಹೀಗೆ ಯಾವುದೇ ಇರಲಿ, ಅವರು ವ್ಯಕ್ತ ಮಾಡುವ ವಿಚಾರಗಳಲ್ಲಿ ಸಾಹಿತ್ಯದ ಪ್ರಮುಖ ಜೀವಾಳವೆಂದರೆ ಹಾಸ್ಯ. ಈ ಹಾಸ್ಯದ ಮೂಲಕವೇ ಆರೋಗ್ಯಕರ ಸಮಾಜ ನಿರ್ಮಾಣದ ಗುರಿ ಇರುವುದನ್ನು ಕಾಣಬಹುದು. ವಿಮರ್ಶಾತ್ಮಕ ಲೇಖನಗಳ ಮೂಲಕ ಡುಂಡಿರಾಜ್ ಅವರ ವ್ಯಕ್ತಿತ್ವದ ಸಾಹಿತ್ಯಕ ಎತ್ತರವನ್ನು ಕಾಣಿಸಲಾಗಿದೆ.
ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...
READ MORE