ಕನ್ನಡ ಸಾಹಿತ್ಯ ಸಂಸ್ಕೃತಿ ಕಥನ

Author : ಕರೀಗೌಡ ಬೀಚನಹಳ್ಳಿ

Pages 532

₹ 380.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗಿನ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ ಕಥನಗಳ ವೈಶಿಷ್ಟ್ಯ, ಅನನ್ಯತೆ, ನಿರೂಪಣೆ ಹಾಗೂ ಪ್ರಯೋಗಶೀಲತೆಯನ್ನು ಕುರಿತು ಆಳವಾಗಿ, ಸೂಕ್ಷ್ಮವಾಗಿ ವಿಶ್ಲೇಷಿಸಿರುವ ವಿಮರ್ಶಾಗ್ರಂಥ ’ಕನ್ನಡ ಸಾಹಿತ್ಯ ಸಂಸ್ಕೃತಿ ಕಥನ’.

ಈ ಕೃತಿಯು ಹದಿನೈದು ಶೀರ್ಷಿಕೆಗಳು, ಉಪಶೀರ್ಷಿಕೆಗಳಲ್ಲಿ ಹಬ್ಬಿದ್ದು ಕನ್ನಡ ಭಾಷೆ, ಸಾಹಿತ್ಯ ವಿಕಸನದ ಕಥೆಯನ್ನು ಆಪ್ತವಾಗಿ ನಿರೂಪಿಸುತ್ತ ಕಥೆ ಮತ್ತು ಕಥನ ಕಲೆಯ ವಿವಿಧ ಮಜಲುಗಳನ್ನು ಉಲ್ಲೇಖಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ ಲೇಖಕರು. ಕನ್ನಡ ಕಥನ ಸಾಹಿತ್ಯವನ್ನು ಮೂರು ಘಟ್ಟಗಳಲ್ಲಿ ವಿಂಗಡಿಸಿ 9ನೆಯ ಶತಮಾನದಿಂದ 12ನೆಯ ಶತಮಾನದವರೆಗೆ ಮೊದಲಘಟ್ಟ, 12ನೆಯ ಶತಮಾನದಿಂದ 18ನೆಯ ಶತಮಾನದವರೆಗೆ ಎರಡನೆಯ ಘಟ್ಟ, ಅದು ಹೊಸಗನ್ನಡದ್ದೆಂದು ಅದರಲ್ಲಿ ಹಲವಾರು ಚಾರಿತ್ರಿಕ ಘಟ್ಟಗಳು ಮೈದಾಳಿವೆ ಎಂದು  ನಿರೂಪಿಸುತ್ತ, ಒಟ್ಟು ಕಥಾಸಾಹಿತ್ಯವನ್ನು ವಿಶ್ಲೇಷಿಸುತ್ತ, ಈ ಗ್ರಂಥ ಸಾಗುತ್ತದೆ. ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ಬೋಧಕರಿಗೆ, ಓದುಗರಿಗೆ ಒಂದು ಪ್ರಮುಖ ಆಕರ ಹಾಗೂ ಪರಾಮರ್ಶನ ಗ್ರಂಥವಾಗಿದೆ.

About the Author

ಕರೀಗೌಡ ಬೀಚನಹಳ್ಳಿ
(10 September 1951)

ಕರೀಗೌಡ ಬೀಚನಹಳ್ಳಿ ಅವರು 1951 ಸೆಪ್ಟೆಂಬರ್‌ 10ರಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ವ್ಯಷ್ಟಿ-ಸಮಷ್ಟಿ ಪ್ರಬಂಧ ಮಂಡಿಸಿ  ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. .ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗದಲ್ಲಿ ಕಾರ್ಯ ನಿರ್ವಹಿಸಿದ ನಿವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಸಾರಂಗದ ನಿರ್ದೇಶಕರಾಗಿ ನಂತರ ಕುಲಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಕನ್ನಡ ಸಾಹಿತ್ಯದೆಡೆಗಿನ ಒಲವು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿತ್ತು. ಇವರು ಬರೆದ ಕಥೆ, ಕವನಗಳು ತುಮಕೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವಾಗಿವೆ. ಇವರ ಕಥೆಗಳು ...

READ MORE

Related Books