ಕುವೆಂಪು ಅವರ ಬರಹಗಳ ಕುರಿತು ವಿವಿಧ ಲೇಖಕರು ಮಾಡಿರುವ ಪರಾಮರ್ಶನ ಕೃತಿ ಇದಾಗಿದೆ. ಈ ಕೃತಿಯಲ್ಲಿ ಕುವೆಂಪು ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಕುರಿತು ಜಿ.ಎಸ್. ಶಿವರುದ್ರಪ್ಪ ಅವರು ಬರೆದ ಲೇಖನವಿದೆ. ಭವ್ಯ - ನಿತ್ಯಗಳ ಅಪೂರ್ವ ಸಂಗಮ: ಕುವೆಂಪು ಸಾಹಿತ್ಯ ಮುಂತಾದ ಹಲವಾರು ಲೇಖಕರ ಬರಹಗಳು ಈ ಕೃತಿಯಲ್ಲಿವೆ.
ಕುವೆಂಪು ನಂಬಿದ ದೈವ ಧರ್ಮ: ಕೋ. ಚನ್ನಬಸಪ್ಪ, ನವ ಕನ್ನಡತ್ವ ನಿರ್ಮಾಣದ ಆಚಾರ್ಯ ಕುವೆಂಪು: ಬಂಜಗೆರೆ ಜಯಪ್ರಕಾಶ್, ಕುವೆಂಪು ಅವರ ನಿಸರ್ಗ ಕವಿತೆ: ವಿ ಚಂದ್ರಶೇಖರ ನಂಗಲಿ, ಕುವೆಂಪು ಮತ್ತು ಬೇಂದ್ರೆ ಕಾವ್ಯ- ಒಂದು ತೌಲನಿಕ ಅಧ್ಯಯನ: ಕೆ.ಪಿ. ನಟರಾಜ್, ಕುವೆಂಪು ಅವರ ಕಥನ ಪ್ರತಿಭೆಯ ದಾರ್ಶನಿಕ ನೆಲೆಗಳು: ಡಿ.ಎಸ್. ನಾಗಭೂಷಣ್ ಹಾಗೂ ಮುಂತಾದವರು ಕುವೆಂಪು ಅವರ ಸಾಹಿತ್ಯದ ಕುರಿತು ಬರೆದ ಲೇಖನಗಳ ಸಂಕಲನವಾಗಿದೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE