ನೂಪುರ ನಾದ

Author : ಸಂಧ್ಯಾ ಶರ್ಮ ವೈ.ಕೆ

Pages 220

₹ 250.00




Published by: ಸಾಹಿತ್ಯ ಸುಗ್ಗಿ ಪ್ರಕಾಶನ
Address: # 40, 1ನೇ ಮುಖ್ಯರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-560072

Synopsys

ಖ್ಯಾತ ಲೇಖಕಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಪ್ರಸ್ತುತ ಬೆಂಗಳೂರಿನ ಪ್ರಸಿದ್ಧ ಉತ್ತಮ ನೃತ್ಯ ವಿಮರ್ಶಕಿ ಎಂದು ಹೆಸರಾಗಿದ್ದಾರೆ. ಇವರ ಅಸಂಖ್ಯಾತ ನೃತ್ಯ ವಿಮರ್ಶೆಗಳು ನಾಡಿನ ಎಲ್ಲ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿ ಕಲಾಲೋಕಕ್ಕೆ ಇವರಿಂದ ಸಾಕಷ್ಟು ಉತ್ತಮ ಸೇವೆ ಲಭ್ಯವಾಗುತ್ತಿದೆ. ಇವರು ನೃತ್ಯ-ನಾಟಕಗಳ ವಿಮರ್ಶಕಿಯ ಜೊತೆಗೆ ಕಾದಂಬರಿಗಾರ್ತಿ, ಅಂಕಣಗಾರ್ತಿ ಮತ್ತು ರಂಗಕರ್ಮಿಯ ಹೌದು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರದು ಕಳೆದ 52 ವರ್ಷಗಳ ಸಾಹಿತ್ಯ ಪಯಣ, ಇವರ ನೂರಾರು ಸಣ್ಣಕತೆಗಳು, ಕಾದಂಬರಿಗಳು, ಕವನಗಳು, ಹಾಸ್ಯಬರಹಗಳು, ಲೇಖನಗಳು ಮತ್ತು ಅಸಂಖ್ಯಾತ ನೃತ್ಯ ನಾಟಕಗಳು, ವಿಮರ್ಶೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡ ಎಂ.ಎ ಪದವೀಧರೆಯಾಗಿರುವ ಇವರು ವಿವಿಧ ಪತ್ರಿಕೆಗಳಲ್ಲಿ, ಪತ್ರಕರ್ತೆಯಾಗಿ ಕೆಲಸ ಮಾಡಿದ್ದು,ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರ ಆಯ್ದ ಕೆಲವು ನೃತ್ಯ ವಿಶ್ಲೇಷಣೆಗಳ ಈ ಸಂಕಲವನ ನೂಪುರ ನಾದ ವಿವಿಧ ಶೈಲಿಯ ಸುಮನೋಹರ ನೃತ್ಯ ಪ್ರದರ್ಶನಗಳನ್ನು ಕಣ್ಣಾರೆ ಕಂಡ ರಸಾನುಭವವನ್ನು ಕಟ್ಟಿಕೊಡುತ್ತವೆ.

About the Author

ಸಂಧ್ಯಾ ಶರ್ಮ ವೈ.ಕೆ
(01 June 1955)

ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ  ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ  ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...

READ MORE

Related Books