‘ಪುಸ್ತಕ ವಿಮರ್ಶೆ’: ಸಾಂಸ್ಕೃತಿಕ ಬಿಕ್ಕಟ್ಟುಗಳ ಹುಡುಕಾಟ ಲೇಖಕ ಡಾ. ರವಿಕುಮಾರ್ ನೀಹ ಅವರ ವಿಮರ್ಶಾತ್ಮಕ ಕೃತಿ. ಕನ್ನಡ ಪುಸ್ತಕ ವಿಮರ್ಶೆಯು ಇಪ್ಪತ್ತನೆಯ ಶತಮಾನದಲ್ಲಿ ಹೇಗೆ ಬೆಳೆದು ಬಂದಿದೆ ಎಂಬ ಚಾರಿತ್ರಿಕ ನೋಟವು ಇಲ್ಲಿದೆ. ಇದರ ಜತೆಯಲ್ಲಿ ಈಗ ಪುಸ್ತಕದ ವಿಮರ್ಶೆಯು ಹೇಗೆ ರೂಪಾಂತರ ತಳೆಯುತ್ತಿದೆ ಎಂಬ ಸಮಕಾಲೀನ ನೆಲೆಯ ಪ್ರಾಯೋಗಿಕವಾದ ವಿಮರ್ಶೆ ಕೂಡ ಇದೆ ಎನ್ನುತ್ತಾರೆ ಹಿರಿಯ ಲೇಖಕ ಪ್ರೊ. ರಹಮತ್ ತರೀಕೆರೆ. ಏಕಕಾಲಕ್ಕೆ ಇದು ಚಾರಿತ್ರಿಕ ಸಮೀಕ್ಷೆ ಹಾಗೂ ಸಮಕಾಲೀನ ನೋಟಗಳೆರಡನ್ನೂ ಪಡೆಯಲು ಸಾಧ್ಯವಾಗಿದೆ..ಬಹುಶಃ ಕನ್ನಡದಲ್ಲಿ ಮೊದಲಬಾರಿಗೆ ಇಷ್ಟೊಂದು ಮಾಹಿತಿಯನ್ನು ಹಾಗೂ ವಿಶ್ಲೇಷಣೆಯನ್ನು ಕೊಡುವ ಪ್ರಬಂಧವಿದು ಎಂಬುದು ರಹಮತ್ ತರೀಕೆರೆ ಅವರ ಅಭಿಪ್ರಾಯ.
ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...
READ MORE