ಕುವೆಂಪು ಹನುಮದ್ದರ್ಶನ

Author : ಜಿ. ಕೃಷ್ಣಪ್ಪ

Pages 218

₹ 250.00




Year of Publication: 2020
Published by: ಉದಯಭಾನು ಕಲಾಸಂಘ
Address: ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲು ಛತ್ರಗಳ ಎದುರು, ಕೆಂಪೇಗೌಡನಗರ ಬೆಂಗಳೂರು-
Phone: 08026609343

Synopsys

ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ 'ಶ್ರೀರಾಮಾಯಣದರ್ಶನಂ' ಕನ್ನಡದ ಮೇರು ಕೃತಿಯಲ್ಲಿ ಒಂದು. ಶ್ರೀರಾಮಾಯಣದರ್ಶನಂನ ಸುಮಾರು 17 ಶೀರ್ಷಿಕೆಯಿಂದ ನಮಗೆ ಹನುಮದರ್ಶನವಾಗುತ್ತದೆ. ಜಿ. ಕೃಷ್ಣಪ್ಪ ತಮ್ಮ ಇಡೀ ಜೀವನವನ್ನು ಬೇಂದ್ರೆಯವರ ಸಾಹಿತ್ಯದ ಅಧ್ಯಯನಕ್ಕೆ ಮೀಸಲಾಗಿಟ್ಟು ಅವರ ಎಲ್ಲಾ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದವರು ಇದೀಗ ಕುವೆಂಪು ಅವರ 'ಶ್ರೀರಾಮಾಯಣ ದರ್ಶನಂ'ನಲ್ಲಿ ಪ್ರಕಟವಾಗಿರುವ ಹನುಮಂತನ ಅಪೂರ್ವ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಋಷ್ಯಮೂಕ ಪರ್ವತವನ್ನು ವರ್ಣಿಸುವ ರಾಮನ ಮಾತು, ರಾಮಲಕ್ಷ್ಮಣರ ಸಮಾಗಮ, ಆಂಜನೇಯಸ್ವಾಮಿಯ ಸಮುದ್ರಲಂಘನ, ಹಾಗೆ ಅನೇಕ ಘಟನೆಗಳನ್ನು ಈ ಕೃತಿಯಲ್ಲಿ ಕೃಷ್ಣಪ್ಪ ಅವರು ಸೊಗಸಾಗಿ ಚಿತ್ರಿಸಿದ್ದಾರೆ.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books