ಕವಿ ಅಂಬಿಕಾತನಯದತ್ತರ ಕಾವ್ಯಗಳ ವಿಮರ್ಶಾ ಲೇಖನಗಳ ಸಂಗ್ರಹ ಕೃತಿ-ಸಂಭಾವಿತ. ವಿಮರ್ಶಕ ಜಿ.ಎಸ್. ಆಮೂರು ಅವರ ಇಲ್ಲಿಯ 13 ಬರೆಹಗಳು ಬೇಂದ್ರೆ ಅವರ ಕಾವ್ಯದೊಂದಿಗೆ ಅನುಸಂಧಾನ ಮಾಡಿಸುತ್ತವೆ. ಬೇಂದ್ರೆ ಜೀವನಚಿತ್ರ, ಚಿಂತನೆ, ಬದುಕಿನೆಡೆಗಿನ ದೃಷ್ಟಿ, ದೃಷ್ಟಿಕೋನ, ಜೀವನ ಪ್ರಜ್ಞೆ, ಅನುಭವ-ಅನುಭಾವಗಳು ಕಾವ್ಯಭಿವ್ಯಕ್ತಿಯ ಪರಿ ಇತ್ತ್ಯಾದಿ ಕವಿಯೊಬ್ಬನ ವಿವಿಧ ಆಯಾಮಗಳ ಚಿತ್ರಣವನ್ನು ವಿಮರ್ಶಾತ್ಮಕವಾಗಿ ಚಿಂತನೆ ನಡೆಸಿದ ಬರಹಗಳಿವು.
ಯುದ್ಧ, ಚರಿತ್ರೆ, ಧರ್ಮ, ಸಂಸ್ಕೃತಿ ಹೀಗೆ ಬದುಕಿನ ಸಮಗ್ರ ಮಗ್ಗಲುಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಬಡತನದ ಮೂಲಕ ಕಂಡುಕೊಂಡ ಜೀವನ ಸಾಮರಸ್ಯ, ಕ್ರೌರ್ಯ, ಅಸಹಾಯಕತೆ, ಜೀವನ ಸಂಕಲ್ಪದ ಅನಿವಾರ್ಯತೆ, ಮೌಲಿಕ ಬದುಕಿನ ಸಮರ್ಥನೆ ಹೀಗೆ ಒಬ್ಬ ಕವಿ ಎಲ್ಲ ವಲಯಗಳ ಸ್ವರೂಪವನ್ನು ಕಾವ್ಯದಲ್ಲಿ ಕಾಣಿಸಿದ್ದನ್ನು ಇಲ್ಲಿಯ ಲೇಖನಗಳು ಬಿಂಬಿಸುತ್ತವೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE