ಈ ಕೃತಿಯಲ್ಲಿ ನವ್ಯೋತ್ತರ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕಾವ್ಯ, ನಾಟಕ, ಪ್ರವಾಸ ಕಥನ, ಲಲಿತ ಪ್ರಬಂಧ ಮತ್ತು ಕಾದಂಬರಿಗಳ ಕುರಿತು ವಿಸ್ತೃತವಾಗಿ ವಿಮರ್ಶಿಸಿದ್ದಾರೆ. ಸಾಹಿತ್ಯ ಕೃತಿಯೊಂದು ಕೇವಲ ಭಾಷಿಕ ಚೌಕಟ್ಟಿಗೆ ಮಾತ್ರ ಸಂಬಂಧಿಸಿದ್ದಲ್ಲ ಅದು ಸಾಂಸ್ಕೃತಿಕ ವ್ಯಾಪ್ತಿಯನ್ನು ಹೊಂದಿದೆಯೆಂಬ ನಿಲುವು ಲೇಖಕರದ್ದು. ಒಂದು ಕೃತಿಯಲ್ಲಿ ಅನನ್ಯವಾಗಿರುವ ವಿಶಿಷ್ಟ ಗುಣಗಳನ್ನು ಬಹು ಸೂಕ್ಷ್ಮವಾಗಿ ಗ್ರಹಿಸುವುದು ವಿಮರ್ಶೆಯ ನಿಜವಾದ ಕಾರ್ಯವಾಗಿದೆ. ಲೇಖಕರು ಈ ಕಾರ್ಯವನ್ನು ತಮ್ಮ ಕೃತಿಯಲ್ಲಿ ಅಧಿಕ ಎಚ್ಚರಿಕೆಯಿಂದ ಮಾಡಿದ್ದಾರೆ.
ಲೇಖಕ ಸಿ.ಎಸ್.ಭೀಮರಾಯ ಅವರು ಹೊಸ ತಲೆಮಾರಿನ ಕವಿ ಮತ್ತು ವಿಮರ್ಶಕ. 1981ರಲ್ಲಿ ಜನನ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಭಾಷೆ ಉಪನ್ಯಾಸಕರು. ಈವರೆಗೆ ಕನ್ನಡದಲ್ಲಿ ಐದು ಮತ್ತು ಆಂಗ್ಲ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾವ್ಯ, ಪ್ರಬಂಧ ಮತ್ತು ವಿಮರ್ಶೆಗಳಲ್ಲಿನ ಸಂವೇದನೆಗಳು, ಧ್ಯೇಯ-ಧೋರಣೆಗಳು ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳ ಬಗೆಗಿನ ತೀವ್ರ ಕಾಳಜಿ, ಅನ್ಯಾಯದ ವಿರುದ್ಧ ಸಿಡಿದೇಳುವ ಆಕ್ರೋಶ, ಸಿಟ್ಟು, ವ್ಯಂಗ್ಯ, ಬಂಡಾಯ-ಅವರ ಬರವಣಿಗೆಯಲ್ಲಿ ಗಮನ ಸೆಳೆಯುತ್ತವೆ. ಕೃತಿಗಳು: ...
READ MORE