‘ಪ್ರೇಮ ಭಕ್ತಿ’ ಲೇಖಕ ಸಿ.ಎನ್. ರಾಮಚಂದ್ರನ್ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಗೆ ಪತ್ರಕರ್ತ, ಲೇಖಕ ರಘುನಾಥ ಚ.ಹ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ‘ಬರೆಯುವ ಸುಖಕ್ಕಾಗಿ ಹಾಗೂ ಬರವಣಿಗೆ ತಂದುಕೊಡುವ ಕೀರ್ತಿಗಾಗಿ ಬರೆಯುವವರೇ ಹೆಚ್ಚಾಗಿರುವ ಸಂದರ್ಭದಲ್ಲಿ, ಕೆಲವು ಲೇಖಕರು ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಜ್ಞಾಪೂರ್ವಕವಾಗಿ ಬರವಣಿಗೆ ಮಾಡುವುದಿದೆ. ತನಗೆ ಏನೆಲ್ಲವನ್ನೂ ಕೊಟ್ಟ ಸಾಹಿತ್ಯ ಹಾಗೂ ಸಮಾಜಕ್ಕೆ ಕೃತಜ್ಞತೆ ಸಲ್ಲಿಸುವ ಕರ್ತವ್ಯ ರೂಪದ ಬರವಣಿಗೆ ಅದು. ಅಂಥ ಬದ್ಧತೆ ಹಾಗೂ ವಿಮರ್ಶಾ ವಿವೇಕದ ರೂಪದಲ್ಲಿ ನೋಡಬಹುದಾದ ಈ ಕೃತಿಯಲ್ಲಿ, ಇತಿಹಾಸದ ಪುಟಗಳ ದೂಳು ಹೊಡೆದು, ಮಸುಕಾದ ಚಿತ್ರಗಳನ್ನು ವರ್ತಮಾನದ ತಲೆಮಾಲಿಗೆ ತೋಲಿಸುವ ಹಂಬಲವೂ ಇದೆ.
ಭಕ್ತಿ ಸೃಜನಶೀಲವಾಗಿದ್ದಾಗ ಹೊಂದುವ ಮಾನವೀಯ ಸ್ವರೂಪವನ್ನು ಈ ಪುಟ್ಟ ಪುಸ್ತಕ ಬಹು ಸೊಗಸಾಗಿ ಸಮರ್ಥವಾಗಿ ಸಹೃದಯರ ಗಮನಕ್ಕೆ ತರುತ್ತಿದೆ. ಗಾತ್ರ ಹಾಗೂ ವಿದ್ವತ್ತಿನ ದೃಷ್ಟಿಯಿಂದ ಈ ಬರವಣಿಗೆ ಸಿ.ಎನ್. ರಾಮಚಂದ್ರನ್ ಅವರ ಕೃತಿ ಶ್ರೇಣಿಯಲ್ಲಿ ಪ್ರತ್ಯೇಕವಾಗಿ ನಿಲ್ಲಬಹುದು, ಆದರೆ, ಲೇಖಕನೊಬ್ಬನಿಗೆ ತನ್ನ ಬರವಣಿಗೆ ಸಾರ್ಥಕವೆನ್ನಿಸುವ ಆತ್ಮತೃಪ್ತಿ ಉಂಟುಮಾಡುವ ಗುಣ ಈ ಕೃತಿಗಿದೆ. ಈ ದೇಶದ ಸಾಮರಸ್ಯದ ನೆಲೆಗಳನ್ನು ನೆನಪಿಸುವ ವಿವೇಕ ಕೃತಿಯ ಹೊಳಪನ್ನು ಹೆಚ್ಚಿಸಿದೆ. ಇತಿಹಾಸದ ಒಂದು ಮಗ್ಗುಲನ್ನಷ್ಟೇ ಮುನ್ನೆಲೆಗೆ ತರುವ ಅಪಾಯಗಳ ಬಗ್ಗೆ ಗಮನ ಸೆಳೆಯುವ ಈ ಬರವಣಿಗೆ, ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಸಲಸಿದ ಅಧ್ಯಾಯಗಳ ಮಹತ್ವವನ್ನು ಮನಗಾಣಿಸುವಂತಿದೆ.
ಕೃಷ್ಣಭಕ್ತಿಯ ಮುಸ್ಲಿಂ ಕವಿಗಳ ಬದುಕು-ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಇಲ್ಲಿನ ಬರಹಗಳು, ಸೇಡು ಮತ್ತು ಕೇಡಿನಿಂದ ನಮ್ಮನ್ನು ಬಿಡುಗಡೆಗೊಳಿಸುವ ಜೀವಶಕ್ತಿ ಹೊಂದಿವೆ. ಅದೇ ಕಾಲಕ್ಕೆ, ಭಾರತದ ಮಣ್ಣು ರೂಪಿಸಿದ ಅಪೂರ್ವ ವ್ಯಕ್ತಿತ್ವಗಳಿಗೆ ವರ್ತಮಾನ ತೊಡಿಸಿರುವ ಚೌಕಟ್ಟುಗಳನ್ನು ದೂರ ಮಾಡುವ ಹಂಬಲವನ್ನೂ ಹೊಂದಿವೆ. ಎಂಬತ್ತೇಳರ ವಯಸ್ಸಿನಲ್ಲಿ ಬಹುತ್ವ ಭಾರತದ ಅನನ್ಯತೆಯನ್ನು ನೆನಪಿಸುವ ಬಹು ಅಗತ್ಯದ ಹೊಣೆಗಾಲಕೆಯನ್ನು ಸಿಯೆನ್ನಾರ್ ನಿರ್ವಹಿಸಿದ್ದಾರೆ. ಸಹೃದಯರ ಕೃತಜ್ಞತೆ ಮತ್ತು ಮೆಚ್ಚುಗೆಗೆ ಈ ಕೃತಿ ಅರ್ಹವಾದುದು ಎಂದಿದ್ದಾರೆ ರಘುನಾಥ ಚ.ಹ.
ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...
READ MORE