‘ಶ್ರಾವಣ ಪ್ರತಿಭೆ’ ಅಂಬಿಕಾತನಯದತ್ತರ ಆಯ್ದ ನೂರು ಕವಿತೆಗಳ ಅರ್ಥವಿವೇಚನೆ. ಕನ್ನಡದ ವರಕವಿ ಎಂದೇ ಪ್ರಸಿದ್ಧರಾದ ದ.ರಾ.ಬೇಂದ್ರೆ ಅವರ ನೂರು ಕವಿತೆಗಳ ಅರ್ಥವಿವೇಚನೆಯನ್ನು ಒಳಗೊಂಡ ಈ ಮಹತ್ವದ ಕೃತಿ ಮರುಮುದ್ರಣಗೊಂಡಿದೆ. ಬೇಂದ್ರೆ ಸಾಹಿತ್ಯಪ್ರೇಮಿಗಳಿಗೆ ಇದೊಂದು ಸಂತಸದ ವಿಷಯ. ಇಲ್ಲಿ ಬೇಂದ್ರೆಯವರ ಸಾಹಿತ್ಯ, ಅದರ ಹಿನ್ನೆಲೆ..ಸಾಹಿತ್ಯದ ಒಲವನ್ನು ಅರ್ಥಪೂರ್ಣವಾಗಿ ನೀಡಲಾಗಿದೆ.
ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಹಾಗೂ ಡಾ. ವಾಮನ ಬೇಂದ್ರೆ ಅವರು ಕವಿತೆಗಳನ್ನು ಆಯ್ದು ಅವುಗಳಿಗೆ ವಿಶ್ಲೇಷಣೆ ಬರೆದಿದ್ದಾರೆ. ಈ ಪುಸ್ತಕವು ಮನೋಹರ ಗ್ರಂಥಮಾಲೆಗೆ 50 ತುಂಬಿದ ಸಂದರ್ಭದಲ್ಲಿ ಪ್ರಕಟಿಸಲಾದ ಐದು ಸಂಪುಟಗಳ ’ಪುಟ ಬಂಗಾರ’ದಲ್ಲಿ ಐದನೆಯ ಸಂಪುಟವಾಗಿ ಪ್ರಕಟವಾಗಿತ್ತು.
ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು 12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ...
READ MORE