ಕುವೆಂಪು ಅವರ ಕಾದಂಬರಿಗಳ ದಟ್ಟಲೋಕದೊಳಕ್ಕೆ ಕರೆದೊಯ್ಯುವ ಟಿ.ಪಿ. ಅಶೋಕ ಅವರ ಈ ಕೃತಿಯು ಆ ಕಾದಂಬರಿಗಳ ಸೂಕ್ಷ್ಮವಿವರಗಳನ್ನು ನಮಗೆ ಪರಿಚಯಿಸುತ್ತದೆ. ಆ ಮೂಲಕ ಕುವೆಂಪು ಕಾಣ್ಕೆಯ ಒಳಗೇ ಇರುವ ವೈಶಿಷ್ಟ್ಯ-ವೈವಿಧ್ಯಗಳನ್ನು ತೆರೆದಿಡುತ್ತದೆ. ಚೇತನವು ಅನಿಕೇತನವಾಗಬೇಕೆಂದು ಹಂಬಲಿಸಿದ ಕವಿ ಕುವೆಂಪು ಹೇಗೆ ತಮ್ಮ ಕಾದಂಬರಿಗಳಲ್ಲಿ ತತ್ಕಾಲೀನ ಲೌಕಿಕ ಬದುಕಿನ ವಿವರಗಳನ್ನು ದೇಶಸ್ಥ-ಕಾಲಸ್ಥ ನೆಲೆಗಳಲ್ಲಿ ದಾಖಲಿಸುತ್ತಾರೆ ಎಂಬುದನ್ನು ಅಶೋಕ ಅವರು ದಾಖಲಿಸಿದ್ದಾರೆ.ಕಾದಂಬರಿಯ ಪಾತ್ರಗಳು ಏಕಕಾಲದಲ್ಲಿ ನಿಜವ್ಯಕ್ತಿಗಳಾಗಿಯೂ ರೂಪಕಗಳಾಗಿಯೂ ಒಡಮೂಡಿಕೊಳ್ಳುತ್ತವೆ ಎಂಬುದನ್ನು ಅವರು ಚರ್ಚಿಸಿದ್ದಾರೆ. ಹಲವು ಸಾಂಸ್ಕೃತಿಕ ಮಹತ್ವದ ಪ್ರಶ್ನೆ ಕೇಳುವ ಅಶೋಕ ಅವರು ಆರಂಭಿಕ ಓದುಗ-ವಿಮರ್ಶಕರಿಬ್ಬರಿಗೂ ಉಪಯುಕ್ತ ಎನ್ನಿಸುವಂತೆ ಚರ್ಚಿಸಿದ್ದಾರೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE