ಲೇಖಕ ಪ್ರಭಾಕರ ಜೋಶಿ ಅವರ ಯಕ್ಷಗಾನ ವಿಮರ್ಶಾ ಸಂಕಲನ ಕೃತಿ ʻಪ್ರಸ್ತುತʼ. ಲೇಖಕ ಎಮ್. ಎಲ್. ಸಾಮಗ ಅವರು ಪುಸ್ತಕದ ಮುನ್ನುಡಿಯಲ್ಲಿ, “ಸಂಕ್ರಮಣದ ಸಂಕಟದಲ್ಲಿರುವ ನಮ್ಮ ಕರಾವಳಿ ಯಕ್ಷಗಾನವು ಹಲವು ವಿವಾದ, ಗೊಂದಲಗಳ ಕಲಾಕ್ಷೇತ್ರವಾಗುತ್ತಿದೆ. ಯಾವ ದಿಕ್ಕಿನಲ್ಲಿ ಸಾಗಿ ಬೆಳೆಯಬೇಕು, ಯಾವ ನಿಟ್ಟಿನಲ್ಲಿ ಬೆಳೆದು ಸಾಗಬೇಕು ಎನ್ನುವುದಕ್ಕೆ ಸರಿಯಾದ ದಿಕ್ಸೂಚಿ ಯಕ್ಷಗಾನದ ಇಂದಿನ ತೀವ್ರ ಅಗತ್ಯ. ಪರಸ್ಪರ ಸಂಬಂಧಿಗಳಾದ ಔಚಿತ್ಯ ಪ್ರಜ್ಞೆ, ರುಚಿಶುದ್ದಿ ಹಾಗೂ ರಸಪ್ರಜ್ಞೆಗಳ ಕೊರತೆಯಿಂದಾಗಿ ಯಕ್ಷಗಾನವು ವಿಚಿತ್ರವಾಗಿ ಬೆಳೆಯುತ್ತಿದೆ, ಅದರೊಂದಿಗೆ ಸ್ವಂತಿಕೆಯ ಕಲಾಶ್ರೀಮಂತಿಕೆಯನ್ನು ಕಳದುಕೊಳ್ಳುತ್ತಿದೆ ಎನ್ನುವುದೂ ಅಷ್ಟೆ ಸತ್ಯ. ಈ ಅಗತ್ಯ ಮತ್ತು ಕೊರತೆಗಳನ್ನು ಪೂರೈಸುವುದಕ್ಕೆ ಹಾಗೂ ತುಂಬಿಸುವುದಕ್ಕೆ ಶ್ರೀ ಪ್ರಭಾಕರ ಜೋಶಿಯವರು ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದಾರೆ ಎನುವುದು ಅವರನ್ನು ಹತ್ತಿರದಿಂದ ಬಲ್ಲ ನನ್ನಂಥವರೆಲ್ಲ ತಿಳಿದಿರುವ ವಿಷಯ. ಆದರೆ ಯಕ್ಷಗಾನ ಅರ್ಥಗಾರಿಕೆಯಂತೆ ಅವೆಲ್ಲ ಆ ವರ್ತಮಾನ ಕಾಲದಲ್ಲೆ ಹುಟ್ಟಿ ಸಾವನ್ನು ಕಂಡಿವೆ, ಭವಿಷ್ಯತ್ತಿಗೆ ಅವು ಉಳಿದಿಲ್ಲ. ಈ ವರ್ಗದ ವಿಮರ್ಶೆಗಿಂತ ಭಿನ್ನವಾಗಿ, ಜೋಶಿಯವರ ವಿಚಾರ ಧಾರೆಗಳು, ವಿಮರ್ಶೆಗಳು ಗ್ರಂಥರೂಪದಲ್ಲಿ ಪ್ರಕಟವಾಗುತ್ತಿರುವುದು, ಅವರಿಗೆ ಸಾಹಸದ ಕೆಲಸವಾದರೂ, ನಮಗೆ ಸಂತೋಷದ ಸಂಗತಿ. ಯಕ್ಷಗಾನದ ವಿವಿಧ ಅಂಗಗಳ ಬಗ್ಗೆ ಬಿಡಿ ಬರಹಗಳು, ವಿಮರ್ಶಾ ಸಂಕಲನಗಳು, ಗ್ರಂಥಗಳು ಈಗಾಗಲೆ ಸಾಕಷ್ಟು ಪ್ರಕಟವಾಗಿವೆ. ಆದರೆ ಶ್ರೀ ಪ್ರಭಾಕರ ಜೋಶಿಯವರು ಡಾ. ಶಿವರಾಮ ಕಾರಂತರ ನಂತರ ಗಮನ ಸೆಳೆದ ಗಟ್ಟಿಯಾದ ವಿಮರ್ಶಕ- ಕಲಾವಿದ. ವಿಮರ್ಶಕನ ಜವಾಬ್ದಾರಿಗಳಲ್ಲಿ ಒಂದಾದ correction of taste ಮತ್ತು creation of taste (ಸದಭಿರುಚಿಯ ಸೃಷ್ಟಿ) ಅನ್ನು ಜೋಶಿಯವರು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವುದು ಅವರ ವಿಮರ್ಶೆಗಳಲ್ಲಿ ಸ್ಪಷ್ಟವಾಗುತ್ತದೆ. ಅವರ ಅಭಿಪ್ರಾಯಗಳಲ್ಲಿರುವ ಸೈದ್ಧಾಂತಿಕ ಖಚಿತತೆ, ಬರಹಗಳ ವ್ಯಾಪಕತೆ, ವಿಷಯ ವೈಶಾಲ್ಯ, ವಿಷಯ ನಿರೂಪಣೆಯಲ್ಲಿ ಸಂಕ್ಷಿಪ್ತತೆ, ಆಧುನಿಕ ವಿಮರ್ಶಾ ಶಿಸ್ತಿನ ವಿಶ್ಲೇಷಣಾ ಕ್ರಮ, ಸ್ವತಂತ್ರ ಶೈಲಿ ಇತ್ಯಾದಿ ಗುಣಗಳಿಂದ ಜೋಶಿಯವರ ವಿಮರ್ಶೆಗಳು ಇತರ ಯಕ್ಷಗಾನ ವಿಮರ್ಶೆಗಳ ಮಧ್ಯೆ ವಿಶಿಷ್ಟ ಮತ್ತು ಮುಖ್ಯ ಸ್ಕಾನ ಪಡೆಯುತ್ತವೆ" ಎಂದು ಹೇಳೀದ್ದಾರೆ.
.ಪ್ರಭಾಕರ ಜೋಶಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನವರು. ಪತ್ರಕರ್ತರು. ಸದ್ಯ, ಕಲಬುರಗಿ ರಂಗಾಯಣದ ನಿರ್ದೇಶಕರು. ಕವಿ ರವೀಂದ್ರ ಕರ್ಜಗಿ ಅವರ ಸಮಗ್ರ ಕಾವ್ಯ ’ಅನ್ವಯ ಕಾವ್ಯ’ ಸಂಪಾದಿಸಿದ್ದಾರೆ. ರಂಗ ಚಟುವಟಿಕೆಯಲ್ಲಿ ತೀವ್ರ ತೊಡಗಿಸಿಕೊಂಡಿದ್ದು, ಹಲವು ಕೃತಿಗಳನ್ನು ಪ್ರಕಾಶಿಸಿದ್ದಾರೆ. ...
READ MORE