‘ಅ-ಸತ್ಯ ಅಥವಾ ಸತ್ಯ ?’ ಅನಂತಮೂರ್ತಿಯವರ ಹಿಂದುತ್ವ ಅಥವಾ ಹಿಂದ್ ಸ್ವರಾಜ್ ಕೃತಿಯ ವಿಮರ್ಶೆ. ಲೇಖಕ ಅಜಕ್ಕಳ ಗಿರೀಶ ಭಟ್ ಅವರು ಈ ಕೃತಿಯನ್ನು ರಚಿಸಿದ್ದಾರೆ. ಅನಂತಮೂರ್ತಿಯವರು ತಮ್ಮ ಹಿಂದುತ್ವ ಅಥವಾ ಹಿಂದ್ ಸ್ವರಾಜ್ ಕೃತಿಯಲ್ಲಿ ಸಾವರ್ಕರ್, ಗಾಂಧಿ, ಮೋದಿ ಇವರನ್ನೆಲ್ಲ ಒಟ್ಟಿಗೆ ವಿಮರ್ಶೆ ಮಾಡುತ್ತಾರೆ. ಆದರೆ, ಅವರು ಸಾವರ್ಕರರ, ಹಿಂದುತ್ವದ ಕುರಿತು ಪುಸ್ತಕದ ಹಿಂದಿನ ಅರ್ಧ ಶತಮಾನದ ಕಾಲಧರ್ಮವನ್ನು ನೋಡುವುದಿಲ್ಲ. ಸ್ವಾತಂತ್ರ್ಯಾನಂತರದ ಅರ್ಧ ಶತಮಾನದ ಸೆಕ್ಯುಲರಿಸಮ್ಮಿನ ಅಪಕಲ್ಪನೆಗಳನ್ನು ನೋಡುವುದಿಲ್ಲ. ಈ ಕಾಲಘಟ್ಟದ ಸೆಕ್ಯುಲರಿಸ್ಟ್ ಬರಹಗಾರರು ತೆಗೆದುಕೊಂಡ ನಿಲುವುಗಳು, ಅವರ ಬರವಣಿಗೆ, ಭಾಷಣಗಳು ಹೇಗೆ ವೈರುಧ್ಯಗಳಿಂದ ಕೂಡಿವೆ ಎಂದು ನೋಡುವುದಿಲ್ಲ. 1920ರ ದಶಕದ ಸಾವರ್ಕರರಿಂದ ಗೋಡ್ಸೆವರೆಗೆ ಬಂದು ಅಲ್ಲಿಂದ ನೇರವಾಗಿ 21ನೇ ಶತಮಾನಕ್ಕೆ ಧಾವಿಸುತ್ತಾರೆ. 21ನೇ ಶತಮಾನದ ಕಾಲಧರ್ಮದ ಬಗ್ಗೆ ಚಿಂತಿಸುತ್ತಾರೆ. ಹೀಗಾಗಿ, ಇಡೀ ಹಿಂದುತ್ವ ಅಥವಾ ಹಿಂದ್ ಸ್ವರಾಜ್ ಎಂಬುದು ಅವಸರದ, ತೀರಾ ಮೇಲುಸ್ತರದ ನೋಟಗಳುಳ್ಳ ಕೃತಿಯಾಗಿದೆ ಎನ್ನುತ್ತಾರೆ ಗಿರೀಶ್ ಭಟ್.
ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...
READ MORE