ನೆಹರೂ ಅವರು ರಾಜ್ಯ ಸರಕಾರಗಳಿಗೆ ಹಾಗೂ ವಿವಿಧ ಜನರಿಗೆ ಬರೆದ ಒಂಬತ್ತು ಪ್ರಮುಖ ಪತ್ರಗಳನ್ನು ಇಲ್ಲಿ ಅನುವಾದಿಸಲಾಗಿದ್ದು, ಇದು ಮೂಲಭೂತವಾದದ ಇತಿಹಾಸ ಮತ್ತು ಅದು ಭವಿಷ್ಯದಲ್ಲಿ ಬೆಳೆಯುವುದಕ್ಕೆ ಕಾರಣವಾದ ನೆಲೆಗಳನ್ನು ಪರಿಚಯಿಸುತ್ತದೆ. ಆರೆಸ್ಸೆಸ್ ಎಂದರೆ ಏನು ಎನ್ನುವ ಬಗ್ಗೆ ಮಧು ಲಿಮಯೆ ಅವರು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಳ್ಳುತ್ತಾ ವಿವರಿಸುತ್ತಾರೆ. 'ಮರೆತು ಹೋದ 1949ರ ವಾಗ್ದಾನ' ಆರೆಸ್ಸೆಸ್ ಸರಕಾರಕ್ಕೆ ಮಾಡಿರುವ ವಾಗ್ದಾನವನ್ನು ಹೇಗೆ ಭಂಗ ಮಾಡಿದೆ ಮತ್ತು ತನ್ನ ರಾಜಕೀಯ ಅಜೆಂಡಾಗಳನ್ನು ಬಹಿರಂಗವಾಗಿ ಹೇಗೆ ಅನುಷ್ಠಾನಕ್ಕೆ ತರುತ್ತಿದೆ ಎನ್ನುವ ಅಂಶವನ್ನು ವಿದ್ಯಾಸುಬ್ರಹ್ಮಣ್ಯಂ ವಿವರಿಸುತ್ತಾರೆ. ಪ್ರೊ. ಪ್ರಭಾತ್ ಪಟ್ನಾಯಕ್ ಜೊತೆಗೆ ಮಾಡಿರುವ ಸಂದರ್ಶನವೂ ಮಹತ್ವ ಪೂರ್ಣವಾದದ್ದು. 'ಹುಷಾರ್, ನಾನು ಹಿಂದೂ ಆಗಿ ಮತಾಂತರಗೊಳ್ಳುತ್ತೇನೆ' ಹಸನ್ ಸುರೂರ್ ಅವರು ಆರಸ್ಸೆಸ್ ಮುಖಂಡರಿಗೆ ಬರೆದ, ವ್ಯಂಗ್ಯದ ಹರಿತವುಳ್ಳ ಪತ್ರ. ಹಾಗೆಯೇ ಜಮಾತೆ ಇಸ್ಲಾಮೀ ಸ್ಥಾಪಕರ ಪುತ್ರನ ಕುತೂಹಲಕಾರಿ ಸಂದರ್ಶನವೂ ಇಲ್ಲಿದ್ದು, ಕಿರಿದಾದ ಪುಸ್ತಕವಾದರೂ ಜ್ವಲಂತ ವಿಷಯಗಳಿಗೆ ಸಂಬಂಧಿಸಿದಂತೆ ಅಪಾರ ಮಾಹಿತಿಗಳನ್ನು ನೀಡುತ್ತದೆ.
ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರು. ವೃತ್ತಿಯಿಂದ ಇಂಜಿನಿಯರ್. ವಿದ್ಯಾರ್ಥಿ ದೆಸೆಯಲ್ಲಿ ಎಂಬತ್ತರ ದಶಕದಲ್ಲಿ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗದ ಸಂದರ್ಭದಲ್ಲಿ ಎಸ್ ಎಫ್ ಐ ಮತ್ತು ದಲಿತ ಸಂಘರ್ಷ ಸಮಿತಿಯ ಜೊತೆಗೂಡಿ ಪ್ರಗತಿಪರ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಆಗ ನಡೆದ ವಿಜಯ ನಗರ ಉಕ್ಕು ಕಾರ್ಖಾನೆ ( ಈಗ ಜಿಂದಾಲ್)ಯ ಬೇಡಿಕೆಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿವಿದ ಪ್ರಗತಿಪರ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ತುಂಗಾ ಉಳಿಸಿ ಹೋರಾಟ, ಜಪಾನ್ ಟೌನ್ ಶಿಪ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ಪರ್ಯಾಯ ...
READ MORE