ಡಾ. ಸೌಮ್ಯ ಹೇರಿಕುದ್ರು ಅವರ ‘ಪರಿಮಿತದ ಬೆಳಗು’ ಕೃತಿಯು ಆಧುನಿಕ ಜ್ಞಾನಮೀಮಾಂಸೆಗೆ ತೇಜಸ್ವಿ ಕಥನದ ಪ್ರತಿಕ್ರಿಯೆ. ತೇಜಸ್ವಿಯ ಕಥನ ದೇಶೀಯ ಮತ್ತು ಗ್ರಾಮೀಣ ಮಟ್ಟದಲ್ಲಿ ಭಾರತ ಇಂದು ಎದುರಿಸುತ್ತಿರುವ ಸಮಸ್ಯೆಯ ಕುರಿತು ಚರ್ಚಿಸುತ್ತಾ ಸಮಾಜಶಾಸ್ತ್ರಿಯ ಆವರಣವನ್ನು ಪಡೆದುಕೊಳ್ಳುತ್ತದೆ. ಆಧುನಿಕ ನಾಗರಿಕತೆ, ಚಿಂತನೆಗಳು ಇಂದು ತರುವ ಅಪಾಯಗಳನ್ನು ಶೋಧಿಸಬೇಕಾದ ಅನಿವಾರ್ಯತೆ ಮತ್ತು ನಮ್ಮ ಸಮಾಜದ ಒಳಗೆ ಅದು ಬಿಂಬಿಸುವ ಗೊಂದಲಗಳನ್ನು ನಿವಾರಿಸಿಕೊಳ್ಳುವ ಹಾಗೂ ಆ ಮೂಲಕ, ನಮ್ಮ ಸ್ವಂತಿಕೆಯನ್ನು ಮತ್ತು ಅಂತಃಶಕ್ತಿಯನ್ನು ಪುನಃ ದಕ್ಕಿಸಿಕೊಳ್ಳಬೇಕಾದ ಅಗತ್ಯತೆಯ ಕುರಿತು ತೇಜಸ್ವಿ ಕಥನ ಚರ್ಚಿಸುತ್ತದೆ. ಈ ಹಿನ್ನೆಲೆಯಲ್ಲಿಯೇ, ಆಧುನಿಕ ಚಿಂತನೆಗಳಾದ ಅಭಿವೃದ್ದಿ, ವಿಜ್ಷಾನ ಮತ್ತು ಕೃಷಿಗೆ ತೇಜಸ್ವಿ ಸಾಹಿತ್ಯ ಮುಖಾಮುಖಿಯಾಗುವುದನ್ನು ಗಮನಿಸಬಹುದು. ತೇಜಸ್ವಿ ನಮ್ಮ ಕಥನದಲ್ಲಿ ಪಶ್ಚಿಮದ ತಥಾಕಥಿತ ಆಧುನಿಕ, ಜ್ಞಾನಮೀಮಾಂಸೆಯ ಚಿಂತನೆಗಳನ್ನು ಪ್ರಶ್ನಿಸಿ ಮುಖಾಮುಖಿಯಾಗುತ್ತಾ ಅನಾವರಣಗೊಳಿಸಲು ಪ್ರಯತ್ನಿಸುವ ’ಪೂರ್ವ’ದ ಸಾಂಸ್ಕೃತಿಕ ಸ್ವರೂಪ ಬಹಳ ಮುಖ್ಯವಾದುದು. ಆಧುನಿಕತೆಯ ಏಕಕೇಂದ್ರಿತ ಆಲೋಚನೆಗಿಂತ ಭಿನ್ನವಾಗಿ ಬದುಕಿನ ವೈವಿಧ್ಯತೆಯನ್ನು ಮತ್ತು ವಿವಿಧತೆಯನ್ನು ವಿಸ್ತಾರತೆಯಿಂದ ಹಲವು ಮಗ್ಗಲುಗಳಿಂದ ಶೋಧಿಸಿ ಸಮಾಜ, ಪರಿಸರ, ಮಾನವಶಾಸ್ತ್ರ ಮತ್ತು ವಿಜ್ಷಾನ ಇವುಗಳ ಬಗ್ಗೆ ಕುತೂಹಲ ಹಾಗೂ ಆಸಕ್ತಿಯಿಂದ ಸೂಕ್ಷವಾಗಿ ಗಮನಿಸುತ್ತಾ ಅವುಗಳನ್ನು ತನ್ನ ಸರಳ ನಿರೂಪಣೆಯ ಮೂಲಕ ಜನಪ್ರಿಯ ಕಥನನವಾಗಿ ಮರುನಿರೂಪಿಸುವ ಮೂಲಕ ಆಧುನಿಕ ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ನೋಡುವ ಹಾಗೂ ಅರ್ಥೈಸುವ ಪ್ರಯತ್ನವನ್ನು ತೇಜಸ್ವಿ ನಡೆಸಿದರು. ಪ್ರಜ್ಞೆಯ ಮತ್ತು ಅಪ್ರಜ್ಞೆಯ ನೆಲೆಯಲ್ಲಿ ಅಂದರೆ ಕೆಲವೊಮ್ಮೆ ತಮಗೆ ಅರಿವಿದ್ದು ಕೆಲವೊಮ್ಮೆ ಅರಿವಿಲ್ಲದೆ ಆಧುನಿಕೋತ್ತರ ಚಿಂತನೆಯ ಚರ್ಚೆಯನ್ನು ಆರಂಭಿಸಿದ ಜಾಣ್ಮೆಯೂ ಕೂಡ ಇಲ್ಲಿ ವ್ಯಕ್ತವಾಗಿದೆ.
ಲೇಖಕಿ ಡಾ. ಸೌಮ್ಯ ಹೇರಿಕುದ್ರು ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆರಿಕುದ್ರು ಗ್ರಾಮದವರು. ಕನ್ನಡ ಸ್ನಾತಕೋತ್ತರ ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಆಧುನಿಕ ಕಾವ್ಯ ಸಣ್ಣಕತೆ, ರಂಗಭೂಮಿ ಮತ್ತು ಸಂಶೋಧನೆ ಅವರ ಆಸಕ್ತಿ ಕ್ಷೇತ್ರಗಳು. ತೇಜಸ್ವಿ ಕಥನಗಳ ತಾತ್ವಿಕ ವೈಚಾರಿಕ ವಿಮರ್ಶೆ ಹಾಗೂ ಮರು ಓದು ಅವರ ವಿಶೇಷ ಆಸಕ್ತಿ. ಮೂರು ಚಿನ್ನದ ಪದಕಗಳನ್ನು ಪಡೆದಿರುವ ಲೇಖಕರು ‘ಜ್ಞಾನಮೀಮಾಂಸೆಯ ಆಧುನಿಕ ಜಿಜ್ಞಾಸೆ: ತೇಜಸ್ವಿ ಕಥನ’ ವಿಷಯವಾಗಿ ಪಿ.ಎಚ್.ಡಿ ಪಡೆದಿದ್ದಾರೆ. ಅನೇಕ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜರ್ನಲ್ ಗಳಲ್ಲಿ ಪ್ರಕಟಗೊಂಡಿವೆ. 2018 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ...
READ MORE