‘ನಿನ್ನ ಚರಿತ್ರೆ ನಿನಗೆ ಸಹಜ’ ಲೇಖಕ ಡಾ. ಪ್ರಸಾದಸ್ವಾಮಿ ಎಸ್. ಅವರ ಸಾಂಸ್ಕೃತಿಕ ವಿಮರ್ಶೆ. ಈ ಕೃತಿಗೆ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಸಿನೆಮಾ, ವಿಮರ್ಶೆ, ಭಾಷಾ ಚಿಂತನೆ, ಕವಿತೆ, ಕತೆ, ನಾಟಕ ಹೀಗೆ ಹಲವು ವಲಯಗಳಲ್ಲಿ ಪರಿಶ್ರಮ ಇರುವ ಡಾ. ಎಸ್. ಪ್ರಸಾದಸ್ವಾಮಿ ಅವರ ಸಾಹಿತ್ಯಚಿಂತನೆ, ಸಮಾಜ ಚಿಂತನೆಯನ್ನು ಒಳಗೊಂಡ 19 ಬರಹಗಳು ಇಲ್ಲಿವೆ. ಬಿಡಿ ಕವಿತೆಗಳ ವಿಮರ್ಶೆ, ಕೃತಿವಿಮರ್ಶೆ, ಕಥನ ವಿಮರ್ಶೆ, ಸಾಹಿತ್ಯ ತಾತ್ವಿಕತೆಯ ಚರ್ಚೆ, ವ್ಯಕ್ತಿಗಳ ಕೊಡುಗೆಗಳ ಚರ್ಚೆ ಹೀಗೆ ಇಲ್ಲಿನ ಹರವು ವಿಸ್ತಾರವಾದುದು.
ಬರಹರೂಪಿ ಚರಿತೆಯೆಂಬುದು ಹಲವು ನಿಯಂತ್ರಣಗಳಿಗೆ ಗುರಿಯಾದ ಕಟ್ಟಾಣಿಕೆ ಎಂಬ ನಂಬುಗೆ ಇಲ್ಲಿದೆ. ಸರಳವಾದ ಸಮೀಕ್ಷಾ ರೂಪಿ ಮಂಡನೆ, ತೌಲನಿಕ ವಿವೇಚನೆ, ಪ್ರಾಯೋಗಿಕ ವಿಮರ್ಶೆಯ ಕ್ರಮ, ಗುಣಗ್ರಾಹಿತನ, ತಪ್ಪನ್ನು ಮುಖಕ್ಕೆ ರಾಚುವಂತೆ ಹೇಳುವ ಕಟುತನ, ಪ್ರಾಮಾಣಿಕತೆ, ಸ್ವಂತಿಕೆಯ ದೃಷ್ಟಿ, ತರ್ಕಬದ್ಧ ಮಂಡನಾಗುಣ, ಸಾರಾಂಶೀಕರಣ ವಿಧಾನ ಇವರ ವಿಮರ್ಶೆಯ ಕೆಲವು ಮೆತೆಡ್ಡುಗಳು ಎಂದಿದ್ದಾರೆ ಡಾ. ರಾಮಲಿಂಗಪ್ಪ ಟಿ. ಬೇಗೂರು.
ಲೇಖಕ, ವಿಮರ್ಶಕ, ಸಂಪಾದಕ, ಅನುವಾದಕ ಎಸ್. ಪ್ರಸಾದಸ್ವಾಮಿ ಅವರು ಜನಿಸಿದ್ದು 1965 ಜುಲೈ 21ರಲ್ಲಿ. ಹುಟ್ಟೂರು ಚಿತ್ರದುರ್ಗ. ಪ್ರಸ್ತುತ ಬೆಂಗಳೂರಿನ ಟಿ ದಾಸರಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರೊಫೆಸರ್- ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮನ್ನು ಕಾಲೇಜು ದಿವಸಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಸಾದಸ್ವಾಮಿಯವರ ಪ್ರಮುಖ ಕೃತಿಗಳೆಂದರೆ ನೀರು ತಂದವರು, ರಂಗರಾವಣ, ಶೀಲವೆಂಬುದು ಸೂತಕ, ಲೋಕದ ಪರಿಯೆ ಅಲ್ಲ ಇವರ ಪ್ರಮುಖ ಕೃತಿಗಳು. ಇವರಿಗೆ ಕೆ.ವಿ. ಸುಬ್ಬಣ್ಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ...
READ MORE