ನವ್ಯ ಸಾಹಿತ್ಯ ದರ್ಶನ

Author : ಶಾಂತಿನಾಥ ದೇಸಾಯಿ

Pages 216




Year of Publication: 2004
Published by: ರಾಜ್ಯ ಕೇಂದ್ರ ಗ್ರಂಥಾಲಯ
Address: ಬೆಂಗಳೂರು

Synopsys

ಹಿರಿಯ ಲೇಖಕ, ಕಾದಂಬರಿಕಾರ ಡಾ. ಶಾಂತಿನಾಥ ದೇಸಾಯಿ ಅವರ ’ನವ್ಯ ಸಾಹಿತ್ಯ ದರ್ಶನ’ ಕೃತಿಯು ವಿಮರ್ಶಾತ್ಮಕ ಬರವಣಿಗೆಗಳ ಸಂಗ್ರಹವಾಗಿದೆ. ಈ ಗ್ರಂಥವು 32 ಶೀರ್ಷಿಕೆಗಳನ್ನು ಒಳಗೊಂಡಿದೆ. ಕನ್ನಡ ನವ್ಯಕಾವ್ಯದಲ್ಲಿಯ ಮನೋಧರ್ಮ, ಕನ್ನಡ ನವ್ಯಕವಿತೆಯಲ್ಲಿಯ ಮನೋಧರ್ಮ ಕಾರ್ನಾಡ-ದೇಸಾಯಿ ಚರ್ಚೆ, ಎರಡು ದಡಗಳ ಕಾವ್ಯ ಶರಾವತಿ : ಕಣವಿಯರ ಕಾವ್ಯ, ಅಡಿಗರ 'ಭೂತ' : ಒಂದು ವಿಶ್ಲೇಷಣೆ, ಕನ್ನಡ ಕಾವ್ಯಕ್ಕೊಂದು ಹೊಸ ಕಣ್ಣು : ರಾಮಾನುಜನ್ ಅವರ 'ಹೊಕ್ಕುಳಲ್ಲಿ ಹೂವಿಲ್ಲ',ರಾಮಚಂದ್ರ ಶರ್ಮರ 'ಹೇಸರಗತ್ತೆ', ಚಿತ್ತಾಲರ ಕಾವ್ಯದಲ್ಲಿ ಚಿಂತನಶೀಲತೆ ಸಿದ್ಧಲಿಂಗ, ಪಟ್ಟಣಶೆಟ್ಟಿಯವರ ಕಾವ್ಯ, ಜಯಂತ ಕಾಯ್ಕಿಣಿ : ರಂಗದಿಂದೊಂದಿಷ್ಟು ದೂರ, ಆಧುನಿಕ ಕನ್ನಡ ಕಾವ್ಯ : ಉತ್ತರ ಕರ್ನಾಟಕದ ಕೊಡುಗೆ, ಕನ್ನಡ ಸಣ್ಣ ಕತೆಗಳಲ್ಲಿ ನವ್ಯತೆ, ಯಶವಂತ ಚಿತ್ತಾಲರ ಕಥಾಸಿದ್ದಿ, ಪಿ. ಲಂಕೇಶರ 'ನಾನಲ್ಲ', ವೀಣಾ ಅವರ 'ಮುಳ್ಳುಗಳು': ಒಂದು ಟಿಪ್ಪಣಿ, ಲಂಕೇಶ, ಸದಾಶಿವರ ಆಯ್ದ ಕತೆಗಳು, ಎಸ್. ದಿವಾಕರರ 'ಇತಿಹಾಸ', 'ಸಂಸ್ಕಾರ' : ಪ್ರೇರಣೆ – ತಂತ್ರ, ಸಂಸ್ಕಾರ : ಕಾದಂಬರಿ - ಚಲನಚಿತ್ರ : ತಂತ್ರ, ಯಶವಂತ ಚಿತ್ತಾಲರ 'ಮೂರು ದಾರಿಗಳು”, ಪಿ. ಲಂಕೇಶರ 'ಬಿರುಕು', ಕುಸುಮಾಕರರ 'ನಾಲ್ಕನೆಯ ಆಯಾಮ', ಕಾರ್ನಾಡರ 'ಹಯವದನ' : ರೇಡಿಯೊ ಸಂದರ್ಶನ ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ವಿಮರ್ಶೆ, ವಿಮರ್ಶೆಯಲ್ಲಿ ಪ್ರಭಾವಗಳ ಅಭ್ಯಾಸ, ಅನ್ಯದೇಶೀಯ ಸಾಹಿತ್ಯಕ ಹಾಗೂ ತಾತ್ವಿಕ ಪ್ರಭಾವಗಳು ಆಧುನಿಕ ಪಾಶ್ಚಾತ್ಯ ವಿಮರ್ಶೆಯ ಒಲವು-ನಿಲುವುಗಳು,, ಡಾ. ವ್ಹಿ. ಕೆ. ಗೋಕಾಕರ ವಿಮರ್ಶೆ : ಒಂದು ಟಿಪ್ಪಣಿ ಎ೦ಜಿಕ – ಒಬ್ಬ ನಿಷ್ಟಾವಂತ ವಿಮರ್ಶಕ, ಲಿಯನಲ್ ಟ್ರಿಲ್ಲಿಂಗ್ ಒಬ್ಬ ಸಂಸ್ಕೃತಿ-ನಿಷ್ಟ-ವಿಮರ್ಶಕ ಪ್ರತಿಮಾವಾದ, ಅಸ್ತಿತ್ವವಾದ ಮತ್ತು ಕನ್ನಡ ಸಾಹಿತ್ಯ, ಆಯ್.ಎ ರಿಚರ್ಡನ ಮೌಲ್ಯ ನಿರ್ಣಯ ಸಿದ್ದಾಂತ ಹೀಗೆ ವಿವಿಧ ಶೀರ್ಷಿಕೆಗಳಿವೆ.

About the Author

ಶಾಂತಿನಾಥ ದೇಸಾಯಿ
(22 July 1929 - 26 March 1998)

ನವ್ಯಕಾದಂಬರಿಕಾರರು, ವಿಮರ್ಶಕರು, ಕಥೆಗಾರರೆಂದೇ ಪ್ರಸಿದ್ಧರಾಗಿದ್ದ ಶಾಂತಿನಾಥ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ. ಪ್ರಾಥಮಿಕ ಮತ್ತು ಮೆಟ್ರಿಕ್ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮುಗಿಸಿದರು. ಮುಂದೆ ಮುಂಬಯಿಯ ವಿಲ್ಸನ್ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಆನಂತರ ಬ್ರಿಟಿಷ್ ಸ್ಕಾಲರ್‌ಷಿಪ್ ಪಡೆದು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.ಅಲ್ಲಿಂದ  ಹಿಂದಿರುಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸಲ್ಲಿಸಿದ ಸೇವೆಸಲ್ಲಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಜ್ಞಾನಪೀಠ ...

READ MORE

Related Books