ಕಟ್ಟು

Author : ಬಸಯ್ಯ ಸ್ವಾಮಿ ಕಮಲದಿನ್ನಿ

Pages 182

₹ 220.00




Year of Publication: 2024
Published by: ಬಂಡಾರ ಪ್ರಕಾಶನ
Address: ಮಸ್ಕಿ-584124, ರಾಯಚೂರು ಜಿಲ್ಲೆ
Phone: 9886407011

Synopsys

`ಕಟ್ಟು’ ಡಾ. ಬಸಯ್ಯಸ್ವಾಮಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ಶಾಸನ, ಸಮಾಜ ಎಂಬ ಮೂರು ಭಾಗವನ್ನು ಒಳಗೊಂಡ ಒಟ್ಟು 15 ಲೇಖನಗಳು ಇದರಲ್ಲಿವೆ.(ವಲಸೆ ಸಾಹಿತ್ಯ, ವಚನ ಸಾಹಿತ್ಯ, ಶಾಸನ, ಮತ್ತು ಭಾಷೆ) ಸಾಹಿತ್ಯವನ್ನು ವಿವಿದ ಆಯಾಮಗಳಲ್ಲಿ, ಹಲವು ಮಗ್ಗುಲುಗಳಲ್ಲಿ ನೋಡುವ ಕುತೂಹಲದ ಕಣ್ಣನ್ನೂ ಲೇಖಕ ಹೊಂದಿರುವುದನ್ನು ಇಲ್ಲಿ ಕಾಣಬಹುದು. ಅಷ್ಟೇಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಅವರ ಆಸಕ್ತಿಯು ಡಾಳಾಗಿ ಕಾಣಿಸುತ್ತದೆ. ಕನ್ನಡ ಸಾಹಿತ್ಯವನ್ನು, ಕರ್‍ನಾಟಕ ಸಮಾಜವನ್ನು ಈ ಎರಡು ಕನ್ನಡಕಗಳಲ್ಲಿನ ಓದುವ ಆಸಕ್ತಿ ಇರುವ ಬಸಯ್ಯಸ್ವಾಮಿ ಅವರ ಹೊಸತುಗಳನ್ನು ಕಾಣುವ ತವಕ ಈ ಪುಸ್ತಕದಲ್ಲಿಯೂ ಕಾಣಿಸುತ್ತದೆ. ಹಳಗನ್ನಡ ಮತ್ತು ಹೊಸಗನ್ನಡ ಸಾಹಿತ್ಯದ ಜೊತೆಗೆ ಶಾಸನ, ಬಾಶೆಗೆ ಸಂಬಂದಿಸಿದ ಬರಹಗಳೂ ಈ ‘ಕಟ್ಟಿ’ನಲ್ಲಿ ಇವೆ. 

About the Author

ಬಸಯ್ಯ ಸ್ವಾಮಿ ಕಮಲದಿನ್ನಿ
(01 June 1989)

ಬಸಯ್ಯಸ್ವಾಮಿ ಕಮಲದಿನ್ನಿ ಅವರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆಮದಿಹಾಳ ಗ್ರಾಮದವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ ಕನ್ನಡ ಪದವಿ ಪಡೆದಿದ್ದಾರೆ. ಅದೇ ವಿಶ್ವವಿದ್ಯಾಲಯದಲ್ಲೇ ‘ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ’ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ ಕವಿತೆಗಳು ಕ್ರೈಸ್ಟ್ ಯ್ಯೂನಿವರ್ಸಿಟಿ, ಬೇಂದ್ರೆ ಅಂತರ ಕಾಲೇಜು ಸ್ಪರ್ದೆ ಒಳಗೊಂಡು ವಿವಿಧೆಡೆ ಪ್ರಶಸ್ತಿ ಗೌರವ ಪಡೆದಿವೆ. ಹೊಸತಲೆಮಾರಿನ ಕವಿಯಾಗಿರುವ ಬಸಯ್ಯ ಸ್ವಾಮಿ ಕಮಲದಿನ್ನಿಯವರು ‘ಅವಳೆದೆಯ ಡೈರಿಯೊಳಗೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.    ...

READ MORE

Related Books