ಕುವೆಂಪು ಕ್ಷಕಿರಣ

Author : ಹರಿಹರಪ್ರಿಯ (ಸಾತವಲ್ಲಿ ವೇಂಕಟವಿಶ್ವನಾಥಭಟ್ಟ)

Pages 192

₹ 166.00




Year of Publication: 2015
Published by: ಪುಸ್ತಕಮನೆ
Address: ಪುಸ್ತಕಮನೆ, 702, ಬಿ.ಸಿ.ಸಿ.ಎಚ್.ಎಸ್. ಲೇಔಟ್, ವಾಜರಹಳ್ಳಿ, ತಲಘಟ್ಟಪುರ, ಬೆಂಗಳೂರು-109
Phone: 9242221506/9845867184

Synopsys

ಹರಿಹರಪ್ರಿಯ ಅವರು 1977-2015ರ ಅವಧಿಯಲ್ಲಿ ಬರೆದು ವಿವಿಧ ಕಡೆಗಳಲ್ಲಿ ಪ್ರಕಟಿಸಿದ ಲೇಖನಗಳ ಸಂಕಲನ.  ಕುವೆಂಪು ಅವರ ಬಗ್ಗೆ ಆಸಕ್ತಿ, ಕುತೂಹಲ ಹುಟ್ಟಿಸುವ ಅಪರೂಪದ ವಿವರಗಳು ಈ ಸಂಕಲನದಲ್ಲಿವೆ. ಕುವೆಂಪು ಅವರ ಪ್ರೀತಿ-ಪ್ರೇಮ ಕುರಿತ ಪ್ರಸಂಗ ಮತ್ತು ಬೇಂದ್ರೆಯವರು ಕುವೆಂಪು ಕುರಿತು ಕವಿತೆ ಬರೆದಿದ್ದರೆ ಎಂಬಂತಹ ವಿಷಯಗಳನ್ನು ಕುರಿತ ವಿವರಣೆ ಆಸಕ್ತಿ ಹುಟ್ಟಿಸುವಂತಿವೆ. ಈ ಪುಸ್ತಕವು ಕೇವಲ ಕುವೆಂಪು ಅವರ ’ಆರಾಧನೆ’ ಸೀಮಿತವಾಗದೆ ಹೆಸರೇ ಸೂಚಿಸುವಂತೆ ಕ್ಷ-ಕಿರಣ ಬೀರುವಲ್ಲಿ ಯಶಸ್ವಿಯಾಗಿದೆ. ಪುಸ್ತಕದ ಲೇಖನಗಳನ್ನು ಸಂಗೀತದ ಪರಿಭಾಷೆಯ ಪದಗಳಿಂದ ವಿಂಗಡಿಸಲಾಗಿದೆ. ಮೊದಲ ಭಾಗ ’ವಾದಿ-ಸ್ವರ’ದಲ್ಲಿ ಕುವೆಂಪು ಬೆನ್ನು ಹತ್ತಿದ ಕೊಡಗಿನ ಹೆಣ್ಣು, ನಮ್ಮ ಮೊದಲ ರಾಷ್ಟ್ರಕವಿ ಯಾರು? ಮುಂದಿನ ರಾಷ್ಟ್ರಕವಿ ಯಾರು? ಕರ್ಣಾಟ ಭಾರತ ಕಥಾಮಂಜರಿಯ ನಿಜವಾದ ಸಂಪಾದಕ- ಸುಜನಾ, ನುಡಿಯಿಲ್ಲದ ನಿಸ್ಸೀಮ ಗ್ರಾಮವಾಸಿ ಅಂಬಿಗರ ಚೌಡಯ್ಯ ಲೇಖನಗಳಿವೆ.

ಎರಡನೆಯ ಸಂವಾದಿ ಸ್ವರ ಭಾಗದಲ್ಲಿ ಕುವೆಂಪು ವ್ಯಕ್ತಿತ್ವ ಸ್ಥಾಪಿತ ಪ್ರಜಾ ಚಳುವಳಿ, ಸಾಂಸ್ಕೃತಿಕಲೋಕದ ಜಮಾಖರ್ಚು, ರಾಮಾಯಣ- ಕಾರ್ಡಿನಲ್ಲಿ ಪ್ರತಿಕ್ರಿಯೆ, ಕುವೆಂಪು ಕುರಿತ ಪತ್ರಿಕೆ, ಒಲವು-ನಿಲುವು  ಪ್ರವೇಶ, ವಿಮರ್ಶಾರಂಗದಲ್ಲಿಯೂ ಪಕ್ಷಪಾತವೇ? ಬರಹಗಳಿವೆ. ಮೂರನೆಯ ವಿವಾದಿ ಸ್ವರದಲ್ಲಿ ಕುವೆಂಪು ಪ್ರತಿಮೆ ವಿವಾದ, ಬೇಂದ್ರೆ ಕವಿತೆ ಬರೆದರೊ?, ಜಿ.ವೆಂಕಟಸುಬ್ಬಯ್ಯನವರ ಗಂಜಿ ಮತ್ತು ಅಕ್ಷರಜ್ಞಾನ, ಅನ್ನದಾರತ ಮುಖಗಳಿಗೇ ಮಸಿಬಳಿದ ಮಾಸ್ಟರ್‍ ಹಿರಣ್ಣಯ್ಯ, ಅಡ್ರೆಸ್ಸೇ ಇಲ್ಲದ ಅಡಿಗರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕೇರಫ್ ಕುವೆಂಪು ವಿಳಾಸ, ಕುವೆಂಪುವನ್ನು ಶೂಲಕ್ಕೇರಿಸುವವರ ಪಟ್ಟಿಯ ಒಳಗೆ, ಭಾರತದ ಸಾಂಸ್ಕೃತಿಕ ನಾಯಕ.

ನಾಲ್ಕನೆಯ ಅನುವಾದಿ ಸ್ವರ ಭಾಗದಲ್ಲಿ ಕುವೆಂಪು ಅವರು ದೇ.ಜ.ಗೌ, ಪಿ.ಲಂಕೇಶ್, ಕೋ.ಚೆನ್ನಬಸಪ್ಪ ಅವರಿಗೆ ಬರೆದ ಪತ್ರಗಳ ಕುರಿತ ವಿವರಗಳಿವೆ. ಹಾಗೆಯೇ ಹರಿಹರಪ್ರಿಯ ಅವರ ಕುವೆಂಪು ಒಲವು ನಿಲುವು ಪುಸ್ತಕಕ್ಕೆ ಕೆ.ಎಸ್. ನಿಸಾರ ಅಹಮದ್, ಬಿ.ಬಿ. ರಾಜಪುರೋಹಿತ, ಜಿ.ಎಸ್. ಶಿವರುದ್ರಪ್ಪ, ಬನ್ನಂಜೆ ಅವರು ಬರೆದ ಪತ್ರಿಕ್ರಿಯೆಗಳಿವೆ.

 

About the Author

ಹರಿಹರಪ್ರಿಯ (ಸಾತವಲ್ಲಿ ವೇಂಕಟವಿಶ್ವನಾಥಭಟ್ಟ)

ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಪ್ರೌಢಶಾಲೆಯವರೆಗೆ ಓದಿ ನಂತರ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡದ ಗುರು ಎಂದು ಕೊಂಡ ಹಾಗೆ ತೆಲುಗಿನ ಮಹಾಕವಿ ಶ್ರೀಶ್ರೀ ಅವರು ಹೋರಾಟಕ್ಕೆ ಗುರು. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ನಾನ್ ಅಕಾಡೆಮಿಕ್ ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ ಎಂದು ಹೆಸರು. ...

READ MORE

Related Books