ರುಚಿಕರ ಕಹಿ ಸತ್ಯಗಳ ಕಾಲ

Author : ಯು.ಆರ್. ಅನಂತಮೂರ್ತಿ

Pages 134

₹ 80.00




Year of Publication: 2011
Published by: ವಸಂತ ಪ್ರಕಾಶನ
Address: ನಂ. 360, 10ನೇ 'ಏ' ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-11
Phone: 22443996

Synopsys

ಯಾವ ಸಮಾಜ ಮನುಷ್ಯನ ಬದುಕು ಹೇಗಿರಬೇಕೆಂದು ಸದಾ ಚರ್ಚಿಸುತ್ತಿರುತ್ತದೋ ಅದೇ ನಾಗರಿಕ ಸಮಾಜ. ನಮ್ಮದು ನಾಗರಿಕ ಸಮಾಜವಾಗಿರಬೇಕೆಂದು ಬಯಸುವವರು ಅಂಥ ಚರ್ಚೆಯಲ್ಲಿ ತೊಡಗಿಕೊಳ್ಳಬೇಕಾದ್ದು ಅತ್ಯಗತ್ಯ. ಕರ್ನಾಟಕದ ಅಷ್ಟೇಕೆ ಇಡೀ ಭಾರತದ, ಅಪೂರ್ವ ಚಿಂತಕ ಯು.ಆರ್. ಅನಂತಮೂರ್ತಿಯವರ ಈ ಹೊಸ ಪುಸ್ತಕ ಅಂಥ ಚರ್ಚೆಗೊಂದು ವಿಶಿಷ್ಟ ಕೊಡುಗೆ. ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ನೈತಿಕ ನೆಲೆಯಲ್ಲಿ ಪರಿಶೀಲಿಸುವ
ಇಲ್ಲಿನ ಲೇಖನಗಳು ಬೇರೆ ಬೇರೆ ಸಂದರ್ಭಗಳಲ್ಲಿ ಮೂಡಿಬಂದ ಪ್ರತಿಕ್ರಿಯೆಗಳ ರೂಪದಲ್ಲಿದ್ದರೂ ಒಂದು ಅರ್ಥಪೂರ್ಣ ರೀತಿಯಲ್ಲಿ ಜೋಡಣೆಗೊಂಡಿವೆ, ಪರಸ್ಪರ ಸಂಬಂಧ ಹೊಂದಿವೆ. ಧ್ವನಿಪೂರ್ಣವಾಗಿರುವ ಈ ಲೇಖನಗಳಲ್ಲಿ ಟೀಕೆ ಇದೆ. ವ್ಯಾಖ್ಯಾನವಿದೆ, ಚಿಂತನೆಗೆ ಹಚ್ಚುವ ಸನ್ನಾಹವಿದೆ. ಜೊತೆಗೆ ನಮ್ಮ ಸಾರ್ವಜನಿಕ ಜೀವನ ಹೇಗೆ ಸುಧಾರಿಸೀತು ಎಂಬ ಜಿಜ್ಞಾಸೆಯೂ ಇದೆ. ಅನಂತಮೂರ್ತಿಯವರು ರಾಜಕೀಯದ ಬಗ್ಗೆ ಅಥವಾ ರಾಜಕಾರಣದ ಬಗ್ಗೆ ಬರೆದಾಗ ಅದರಲ್ಲಿ ಸೂಕ್ಷ್ಮಗ್ರಾಹಿಯೊಬ್ಬನ ಬೌದ್ದಿಕ ಸಂಕಟ ಇರುತ್ತದೆ. ಸಾಹಿತ್ಯ ಕೃತಿಯೊಂದರ ಬಗ್ಗೆ ಬರೆದಾಗ ಅದರಲ್ಲಿ ಚರಿತ್ರೆ, ಸಮಾಜ, ಸಂಸ್ಕೃತಿಗಳ ಸಮೂಹ ದರ್ಶನವಿರುತ್ತದೆ. ಅಂತಹ ದರ್ಶನವನ್ನು ಇಲ್ಲಿಯೂ ಕಾಣಬಹುದು. 

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books