ಪಾಶ್ಚಾತ್ಯ ಕಾವ್ಯಚಿಂತನೆಯ ವಿಚಾರಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವ ವಿ.ಎಂ.ಇನಾಂದಾರ್ ಅವರ ಈ ಕೃತಿಯಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಕಳೆದ ಶತಮಾನದ ಮದ್ಯಬಾಗದ ಸುಮಾರಿನಿಂದ ಪ್ರಾರಂಭವಾಗಿ ಈ ಶತಮಾನದ ಪೂರ್ವಾರ್ಧವನ್ನು ಒಳಗೊಂಡಂತೆ ಒಂದು ಶತಮಾನದ ಕಾಲಾವಧಿಯಲ್ಲಿಯ ಆಧುನಿಕ ವಿಚಾರಮಂಥನವನ್ನು ಸ್ಥೂಲವಾಗಿ ವಿವರಿಸುವ ಯತ್ನ ಇಲ್ಲಿ ಮಾಡಲಾಗಿದೆ.
ಹೊಸ ನಿಲುವು, ಮ್ಯಾಥ್ಯು ಅರ್ನಾಲ್ಡ್, ಹೊಸ ಸಮಸ್ಯೆಗಳು, ಕಲೆ ಮತ್ತು ನೀತಿ, ಬೆನೆಡೆಟ್ಟೊ ಕ್ರೊಚೆ, ಭಾಷೆ ಮತ್ತು ಸಾಂಕೇತಿಕ ಕಾವ್ಯ, ಐ.ಎ. ರಿಚರ್ಡ್ಸ್, ಟಿ.ಎಸ್. ಎಲಿಯಟ್ ಎಂಬ ಅಧ್ಯಾಯಗಳಲ್ಲಿ ಇನಾಂದಾರ್ ಅವರ ಆಧುನಿಕ ಪಾಶ್ಚಾತ್ಯ ಕಾವ್ಯ ಚಿಂತನೆಯ ಹೊಳಹುಗಳನ್ನು ಚರ್ಚಿಸಿದ್ದಾರೆ.
ಬೆಳಗಾವಿ ತಾಲೂಕಿನ ಹುದಲಿಯವರಾದ ವಿ.ಎಂ. ಇನಾಂದಾರ್ ಅವರ ಪೂರ್ಣ ಹೆಸರು ವೆಂಕಟೇಶ್ ಮಧ್ವರಾವ ಇನಾಂದಾರ್. ಎಂ.ಎ. ಪದವಿ ಪಡೆದ ನಂತರ ಕೆಲಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿದ ಅವರು 1940ರಲ್ಲಿ ಅಧ್ಯಾಪಕ ವೃತ್ತಿಗೆ ಬಂದರು. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಿವೃತ್ತರಾದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಕವಿತೆ, ನಾಟಕ, ಕಥೆ, ಪ್ರವಾಸಿ ಲೇಖನ, ವಿಮರ್ಶೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಮೂರಾಬಟ್ಟೆ, ಚಿತ್ರಲೇಖಾ, ಕನಸಿನ ಮನೆ ಮನೆ, ಮಂಜು ಮುಸುಕಿದ ದಾರಿ, ಈ ಪರಿಯ ಸೊಬಗು, ಸ್ವರ್ಗದ ಬಾಗಿಲು, ಎರಡು ಧ್ರುವ, ಮೋಹಿನಿ, ನವಿಲು ನೌಕೆ, ಯಾತ್ರಿಕರು, ಬಿಡುಗಡೆ (ಕಾದಂಬರಿ), ಕಾಳಿದಾಸನ ಕಥಾ ನಾಟಕಗಳು, 'ಪಾಶ್ಚಾತ್ಯ ...
READ MORE