ನಡುವೆ ಸುಳಿವ ಆತ್ಮ: ಸ್ತ್ರೀಸಂಕಥನದ ಚಹರೆಗಳು

Author : ಎಂ.ಎಸ್. ಆಶಾದೇವಿ

Pages 152

₹ 105.00




Published by: ಅಹರ್ನಿಶಿ ಪ್ರಕಾಶನ

Synopsys

ಲೇಖಕಿ ಎಂ.ಎಸ್. ಆಶಾದೇವಿ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಸಂಕಲನವನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯದು ಸೃಷ್ಟಿ. ಅದರಲ್ಲಿ ಬೇಂದ್ರೆಯವರ ಸಖಿಗೀತ, ಕಾರಂತರ ಮೈಮನಗಳ ಸುಳಿಯಲ್ಲಿ, ಕುವೆಂಪು ಮತ್ತು ಮಹಿಳೆ, ರಾಜರತ್ನ ಸಾಹಿತ್ಯದಲ್ಲಿ ಸ್ತ್ರೀ, ಲಂಕೇಶ್ ಕೃತಿಗಳ ಹೆಣ್ಣು, ಲಲ್ಲೇಶ್ವರಿ: ಜೀವ ಕಾರುಣ್ಯದ ಅನುಭಾವಿ, ಮರುನಿರೂಪಣೆಯ ತ್ರಿವೇಣಿ: ಸ್ವಶೋಧದ ಎಂ.ಕೆ. ಇಂದಿರಾ, ಸಾರಾ ಅಬೂಬಕರ್‍: ಹೆಣ್ಣು ಮತ್ತು ಬದುಕಿನ ಕೇಂದ್ರಗಳ ಲೇಖಕಿ, ವೈದೇಹಿ ಮತ್ತು ವೀಣಾ, ಸವಿತಾ ನಾಗಭೂಷಣ, ಪ್ರತಿಭಾ ನಂದಕುಮಾರ, ಚಿತ್ರಾ ಮುದ್ಗಲ್, ಓಲ್ಗಾ ಕಾಲಾತೀತ ಸತ್ಯ ಮತ್ತು ಹಂಬಲಗಳ ವ್ಯಾಖ್ಯಾನ, ರೂಪಕಗಳ ಮರು ಓದು’ ಎಂಬ ಅಧ್ಯಾಯಗಳಲ್ಲಿ ಸ್ತ್ರೀವಾದಿ ನೆಲೆಯಲ್ಲಿ ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸಲಾಗಿದೆ. ಎರಡನೆ ಸ್ಥಿತಿ ಭಾಗದಲ್ಲಿ ’ಸ್ತ್ರೀ-ಸಾಹಿತ್ಯ- ಅಭಿವ್ಯಕ್ತಿ- ಸಹಜತೆ, ಮಹಿಳಾ ಪ್ರತಿಭಟನೆಯ ಸಾಂಸ್ಕೃತಿಕ ಚಹರೆಗಳು, ಲೋಹಿಯಾ ಮತ್ತು ಮಹಿಳಾ ನಿಲುವುಗಳು, ಅಪ್ಪಟ ಆಧುನಿಕ ಹೆಣ್ಣು ಸೀತೆ’ ಎಂಬ ಬರಹಗಳಿವೆ. ಮುನ್ನುಡಿಯಲ್ಲಿ ವಿಮರ್ಶಕಿ ಬಿ.ಎನ್. ಸುಮಿತ್ರಾಬಾಯಿ ಅವರು ’ಈ ಕೃತಿಯ ಒಳಗಿರುವ ಹಲವಾರು ಲೇಖನಗಳಲ್ಲಿ ಪಿತೃಸಂಸ್ಕೃತಿಯ ಲಿಂಗರಾಜಕಾರಣದ ಅಸಾಧಾರಣ ಒಳವಿನ್ಯಾಸಗಳ ಮೇಲೆ ಬೆಳಕು ಬೀರಿರುವ ಆಶಾದೇವಿಯವರ ಪ್ರಕಾರ ಬಿಡುಗಡೆಯ ಹಾದಿ ಎಂದು ಮಹಿಳೆ ಗುರುತಿಸಿಕೊಳ್ಳುವ ತಾತ್ವಿಕತೆ ಕೂಡ ಅದೇ ಲಿಂಗ ರಾಜಕೀಯದಿಂದ ಹುಟ್ಟಿರುವ ಪ್ರಗತಿಯ ಲಕ್ಷಣ, ಆದ್ದರಿಂದ ಆಧುನಿಕ ಮಹಿಳೆಯು ಕಂಡುಕೊಳ್ಳುವ ಬಿಡುಗಡೆಯೆಂಬ ಸ್ಥಿತಿ ಹೊರಗೆ ತೋರುವಷ್ಟು ಸ್ವಾತಂತ್ರ್‍ಯದ ಜಾಗ ಆಗಿರುವುದೇ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸುತ್ತಾರೆ. ಶೃಂಗಾರ ರಸದ ಅಭಿನಯದ ಮೂಲಕ ಹೆಣ್ಣಿನ ಆಂತರಿಕ ಸ್ಥಿತಿಯೊಂದಕ್ಕೆ ಬಿಡುಗಡೆ ಸಿಗುತ್ತದೆ ನಿಜ. ಆದರೆ ಅದೇ ಅಭಿನಯದ ದೈಹಿಕ ಲಕ್ಷಣಗಳು ನೋಡುಗರಿಗೆ ಕಳಿಸುತ್ತಿರುವುದು ರೂಢಿಗತ ಭೋಗ ವಸ್ತುವಾದ ದೇಹವಾಗಿರುವ ಹೆಣ್ಣಿನ ಬಗೆಗಿನ ಸಂಕೇತವನ್ನೇ ಆಗಿರಬಹುದು. ಆಗ ಬಿಡುಗಡೆಯ ಜಾಗವೇ ಬಂಧನದ ಮುಂದುವರಿಕೆಯ ಜಾಗವೂ ಆಗಿಬಿಡುವುದನ್ನು ಎಚ್ಚರ ಮತ್ತು ಆತಂಕಗಳಿಂದಲೇ ನೋಡಬೇಕಾಗುತ್ತದೆ ಎನ್ನುವ ಅವರ ನಿಲುವು ಹೊಸ ಚರ್ಚೆಗೆ ಆಹ್ವಾನ ನೀಡಬಲ್ಲದು’ ಎಂದು ವಿವರಿಸಿದ್ದಾರೆ.

About the Author

ಎಂ.ಎಸ್. ಆಶಾದೇವಿ
(26 February 1966)

ಅನುವಾದಕಿ, ವಿಮರ್ಶಕಿ ಆಶಾದೇವಿ ಅವರು 1966 ಫೆಬ್ರವರಿ 26 ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ತಂದೆ ಸೋಮಶೇಖರ್, ತಾಯಿ ಅನಸೂಯಾ. ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಡಿ.ಆರ್.ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿ.ಎಚ್ಡಿ. ಸ್ತ್ರೀಮತವನುತ್ತರಿಸಲಾಗದೇ(ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು) ಉರಿಚಮ್ಮಾಳಿಗೆ(ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ). ವಚನ ಪ್ರವೇಶ( ಸಂಪಾದನೆ). ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು. ವಿವಿಧ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ. ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ...

READ MORE

Related Books