ಸಮಕಾಲೀನ ಸಾಹಿತ್ಯ ಮತ್ತು ಸಾಹಿತಿಗಳ ಕುರಿತು ಆಯಾ ಕಾಲದ ಪ್ರಾಜ್ಞರೇ ಮನದಟ್ಟು ಮಾಡಬಲ್ಲರು. ಕನ್ನಡದ ಇಪ್ಪತ್ತೊಂದು ಹಿರಿಯಸಾಹಿತಿಗಳ ಆಪ್ತಲೋಕವನ್ನು ಹಿರಿಯರಾದ ಎಚ್. ಎಸ್. ವಿ.ಯವರು ತಮ್ಮ ಸ್ನಿಗ್ಧನೋಟದಿಂದ, ಲಾಲಿತ್ಯದಿಂದ, ಆದರದಿಂದ ಬರೆದ ‘ನುಡಿದೀಪ’ ಈ ಪುಸ್ತಕ. ಹೊಸಪುಸ್ತಕದ ನವಿರಾದ ಪರಿಮಳ, ಮುಖಪುಟದ ಸುವರ್ಣದ ಛಾಯೆಯಲ್ಲಿ ಮೂಡಿದ ಎಚ್. ಎಸ್. ವಿ.ಯವರ ನಗು, ಬೆಳಕಿನ ಕಿಂಡಿಯಂತಹ ಸೆಳೆವ ಕಣ್ಣು, ಆಶೀರ್ವಾದವೋ, ಆಹ್ವಾನವೋ ಎಂಬಂತಹ ಹಾವಭಾವ, ಒಳಗಿನ ಪುಟಗಳಲ್ಲಿ ಇಪ್ಪತ್ತೊಂದು ಹಿರಿಯ ಲೇಖಕರ ಅಪರೂಪದ ಭಾವಗಳನ್ನು ಹಿಡಿದಿಟ್ಟ ಕಪ್ಪು-ಬಿಳುಪಿನ ಚಿತ್ರಗಳು, ಈ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಕಾಪಾಡಿಕೊಳ್ಳುವಂತೆ ಮಾಡುತ್ತವೆ. ಇದು ‘ಬಹುರೂಪಿ’ಯ, ಪುಸ್ತಕಗಳ ಮೇಲಿನ ಅಪ್ಪಟ ಶ್ರದ್ಧೆ ಮತ್ತು ಪ್ರೀತಿಯ ದ್ಯೋತಕ.
‘ಆಪ್– ಯುಗ’ದ ಯುವ ಓದುಗರಿಗೆ ಹಿರಿತಲೆಮಾರಿನ ಮುದ್ರಿತ ಪುಸ್ತಕಗಳ ಓದು, ‘ಇ-ಲೋಕ’ದ ಪರಿಣಾಮದಿಂದಾಗಿ, ಸಮಯಾಭಾವದಿಂದಾಗಿ ಅಪರೂಪವಾಗುತ್ತಿರುವಾಗ ‘ಬೆಳಗಾಗಿ ನಾನೆದ್ದು’ ಪುಸ್ತಕ ಓದಿದರೆ ಕನ್ನಡಸಾಹಿತ್ಯದ ಪರಂಪರೆಯ ಬಗ್ಗೆ ಅಭಿಮಾನ, ಆಸಕ್ತಿ ಹುಟ್ಟುವುದು ಖಂಡಿತಾ.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE