ಡಾ. ಎನ್. ಆರ್. ನಾಯಕ ಅವರ ಸಮಗ್ರ ಕಾವ್ಯ ಸಂಕಲನ ’ಬದುಕು ಮಹಾಕಾವ್ಯ’ ಒಟ್ಟು ನಾಲ್ಕು ಸಂಪುಟಗಳಲ್ಲಿ ವಿಸ್ತರಿಸಿಕೊಂಡಿರುವ ಈ ಕಾವ್ಯಗಳಲ್ಲಿನ ಪ್ರಕೃತಿಯ ಒಳನೋಟಗಳನ್ನು ಅರಿಯುವುದು ಮಹಾಯಾನ ಮಾಡಿದಂತಹ ಅನುಭವ. ಇಂತಹ ಸಾಹಸಕ್ಕೆ ಕೈ ಹಾಕಿದ ಅಕ್ಷತಾ ಕೃಷ್ಣಮೂರ್ತಿಯವರು ’ಬದುಕು ಮಹಾಕಾವ್ಯ’ ದಿಂದ ತಾವು ಕಂಡುಕೊಂಡ ಪ್ರಕೃತಿಯ ಒಳನೋಟಗಳು, ರೋಚಕತೆಗಳು, ಕುತೂಹಲಗಳು, ವಿಸ್ಮಯಗಳು, ಕನಸುಗಳ ಅಕ್ಷರರೂಪ ’ಕೇದಿಗೆಯ ಕಂಪು’.
ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ 02 ನವೆಂಬರ್1981 ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು, ದಿನ ಪತ್ರಿಕೆ ,ವಾರಪತ್ರಿಕೆ, ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ...
READ MORE