ಬೇಂದ್ರೆ ಸಮಗ್ರ ಕಾವ್ಯ ದರ್ಶನ

Author : ಜೀವಿ (ಜಿ.ವಿ. ಕುಲಕರ್ಣಿ)

₹ 300.00




Published by: ಪುರೋಗಾಮಿ ಸಾಹಿತ್ಯ ಸಂಘ

Synopsys

ತಮ್ಮ ಹುಚ್ಚ-ಹುಚ್ಚಿ ಕವನ ಸಂಕಲನದ ಮೂಲಕ ಜನಪ್ರಿಯರಾದವರು ಜಿ.ವಿ. ಕುಲಕರ್ಣಿ. ’ಜೀವಿ’ ಎಂದು ಜನಪ್ರಿಯರಾಗಿರುವ ಅವರು ಕವಿ ಬೇಂದ್ರೆಯವರ ಒಡನಾಟದಲ್ಲಿ ಬೆಳೆದವರು. ಅವರದೇ ಹೆಜ್ಜೆ ಜಾಡಿನಲ್ಲಿ ನಡೆಯಲು ಪ್ರಯತ್ನಿಸಿದವರು. ಬೇಂದ್ರೆಯವರ ಸಮಗ್ರ ಕವಿತೆಗಳನ್ನು ಜೀವಿಯವರು ಈ ಗ್ರಂಥದಲ್ಲಿ ವಿವರಿಸಿದ್ದಾರೆ- ವಿಶ್ಲೇಷಿಸಿದ್ದಾರೆ. ಬೇಂದ್ರೆಯವರ ಕವಿತೆಗಳನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಜೀವಿಯವರ ಈ ಕೃತಿಯು ಪ್ರಮುಖ ಪಾತ್ರ ವಹಿಸುತ್ತದೆ. ಬೇಂದ್ರೆಯವರ ಕವಿತೆಗಳಿಗೆ ವಿಭಿನ್ನ ಒಳನೋಟ ನೀಡುವ ಜೀವಿಯವರ ಈ ಗ್ರಂಥ ಬೇಂದ್ರೆ ಕಾವ್ಯಾಭ್ಯಾಸಿಗಳಿಗೆ ಪ್ರಮುಖ ಆಧಾರ ಗ್ರಂಥ ಎಂಬುದರಲ್ಲಿ ಎರಡು ಮಾತಿಲ್ಲ.

About the Author

ಜೀವಿ (ಜಿ.ವಿ. ಕುಲಕರ್ಣಿ)
(10 June 1937)

  ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...

READ MORE

Related Books