ಕನ್ನಡ ಸಾಹಿತ್ಯ –ವೈವಿಧ್ಯತೆ ಮತ್ತು ಅನನ್ಯತೆ

Author : ಎಚ್.ಎಂ.ಚನ್ನಪ್ಪಗೋಳ

Pages 251

₹ 250.00




Published by: ಚೇತನ್ ಬುಕ್ಸ್, ವಿಜಯನಗರ, ಬೆಂಗಳೂರು

Synopsys

ಅರಿಯಲೇ ಬೇಕಿದ್ದ ಐವತ್ತಾರು ಕಲೆಗಳಲ್ಲಿ ಚೋರ ವಿದ್ಯೆಯೂ ಒಂದಾಗಿತ್ತು. ಕನ್ನಡ ಸಾಹಿತ್ಯದಲ್ಲಿ ಕಳ್ಳತನದ ಕಲೆ ಹೇಗೆ ಪ್ರಸ್ತಾಪವಾಗಿದೆ ಎಂಬ ಕುತೂಹಲಕಾರಿ ಅಂಶವೂ ಒಳಗೊಂಡಂತೆ ನಾಡಿನ ಸಾರಸ್ವತ ಲೋಕದ ವೈವಿಧ್ಯತೆ, ಅನನ್ಯತೆಯನ್ನು ಹೇಳುತ್ತದೆ ಕೃತಿ. 

ಗದಾಯುದ್ಧ, ಧರ್ಮಾಮೃತ, ವಡ್ಡಾರಾಧನೆ ಮುಂತಾದ ಕೃತಿಗಳಲ್ಲಿ ಚೋರ ವಿದ್ಯೆಯ ವೈವಿಧ್ಯದ ವರ್ಣನೆ ಮತ್ತು ಚೋರ-ಕಲೆಗೆ ಸಂಬಂಧಿಸಿದ ನೈತಿಕತೆಯನ್ನು ಚರ್ಚಿಸಲಾಗಿದೆ. ಅಲ್ಲದೆ ಹಳಗನ್ನಡ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ನ್ಯಾಯಾಂಗ ವ್ಯವಸ್ಥೆ, ಜೈನ ಚಂಪೂ ಕಾವ್ಯಗಳಲ್ಲಿನ ನ್ಯಾಯ ಮತ್ತು ಶಿಕ್ಷಾ ಪದ್ಧತಿ, ವಚನ ಸಾಹಿತ್ಯದಲ್ಲಿ ಅನುಭಾವದ ಪರಿಕಲ್ಪನೆ, ದಲಿತ ಚಳುವಳಿಯಲ್ಲಿ ಸಾಹಿತ್ಯ ವೈಚಾರಿಕ ಪ್ರಜ್ಞೆಯಂತಹ ಮಹತ್ವದ ಸಂಗತಿಗಳನ್ನು ವಿವರಿಸಲಾಗಿದೆ. 

About the Author

ಎಚ್.ಎಂ.ಚನ್ನಪ್ಪಗೋಳ

ವಿಮರ್ಶಕ, ಲೇಖಕ ಎಚ್.ಎಮ್.ಚನ್ನಪ್ಪಗೋಳ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಕಾಲೇಜು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಚೆನ್ನಮ್ಮ ವಿಶ್ವವಿದ್ಯಾಲಯದ  ಸಿಂಡಿಕೇಟ್ ಸದಸ್ಯರಾಗಿದ್ದಾರೆ.    ...

READ MORE

Related Books