‘ಚಿಪ್ಪಿನೊಳಗಿನ ಮುತ್ತು’ ಸಿದ್ದಲಿಂಗಪ್ಪ ಬೀಳಗಿ ಅವರ ಸಾವಿರದ ಸಾಲುಗಳು ಹಾಯ್ಕು ಕೃತಿಗೆ ಓದುಗರ ಅಭಿಪ್ರಾಯ ಮತ್ತು ವಿಮರ್ಶೆಗಳ ಸಂಕಲನ. ಈ ಕೃತಿಯನ್ನು ಡಾ. ಮುರ್ತುಜಾ ಬ.ಒಂಟಿ ಹಾಗೂ ವೀರಭದ್ರಯ್ಯ ಕೆ. ಶಶಿಮಠ ಅವರು ಸಂಪಾದಿಸಿದ್ದಾರೆ. ಈ ಕೃತಿಗೆ ಡಾ.ರಾಜಶೇಖರ ಮಠಪತಿ, ಪ್ರೊ.ಎಸ್.ಬಿ. ಹಿರೇಸಿಂಗನಗುತ್ತಿ, ದಾನೇಶ್ವರಿ ಬಿ. ಸಾರಂಗಮಠ, ಸಿದ್ದರಾಮ ಹೊನ್ಕಲ್, ಡಾ. ಶಾರದಾ ಮುಳ್ಳೂರ ಹಾಗೂ ಜಬೀವುಲ್ಲಾ ಎಂ. ಅಸದ್ ಅವರ ಅನಿಸಿಕೆಗಳು ಬೆನ್ನುಡಿಯಲ್ಲಿವೆ. ಕೃತಿಯ ಕುರಿತು ಬರೆಯುತ್ತಾ ಹೈಕು ಅಥವಾ ಹಾಯ್ಕು ಕಾವ್ಯ ಕುಸುರಿಯಲ್ಲಿಯೇ ಅತ್ಯಂತ ಸೂಕ್ಷ್ಮವಾದುದು, ಬೆಳಕಿನ ಕವಿ ಸಿದ್ದಲಿಂಗಪ್ಪ ಬೀಳಗಿಯವರ ಭಾವ ಸೂಕ್ಷ್ಮತೆಗೆ ಅದು ದಕ್ಕಿದೆ ಎನ್ನುತ್ತಾರೆ ಡಾ. ರಾಜಶೇಖರ ಮಠಪತಿ. ಸಾವಿರ ಪುಟಗಳ ಸಾಹಿತ್ಯ ಅವರ ನಂಬಿಕೆಯಲ್ಲಿ ಸಾಯುವವರೆಗೂ ಕಾಡುವ, ಎಂದೂ ಸಾಯದ ಸಂದೇಶಗಳು ಅವರ ಹೈಕುಗಳ ಗುರಿ ಮಾತಿನಲ್ಲಿ ಲೋಕಭಿರಾಮರಾಧ ನನ್ನ ಈ ಕವಿಗೆಳೆಯ ಕಾವ್ಯದಲ್ಲಿ ಮಹಾ ಅಕ್ಕಸಾಲಿಗ, ಇದು ಪ್ರತಿಭಾನ್ವಿತ ಕವಿಯ ಕಾವ್ಯಶಕ್ತಿಗೊಂದು ನಿದರ್ಶನವೂ ಕೂಡಾ ಎಂದಿದ್ದಾರೆ.
ಬರಹಗಾರರಾದ ಡಾ. ಮುರ್ತುಜಾ ಬ. ಒಂಟಿ ಅವರು 1970 ಜೂನ್ 1ರಂದು ಜನಿಸಿದರು. ಬಾಗಲಕೋಟೆ ಜಿಲ್ಲೆಯ ಹುನುಗುಂದ ಇವರ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಹುನಗುಂದ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ರಚನೆ ಇವರ ಪ್ರವೃತ್ತಿ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಹುನುಗುಂದ ಮಹಾವಿದ್ಯಾಲಯದಲ್ಲಿ ‘ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬಾಗಲಕೋಟೆ ಜಿಲ್ಲಾ ವಚನ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ ಗೋಕಾಕ, ವ್ಯಕ್ತಿ-ವಿಮರ್ಶೆ, ...
READ MORE