ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ ತೌಲನಿಕ ಅಧ್ಯಯನ

Author : ನಟರಾಜ ಹುಳಿಯಾರ್

Pages 312

₹ 200.00




Year of Publication: 2017
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಆಧುನಿಕತೆ ಮತ್ತು ಪರಂಪರೆಗಳೆರಡು ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಪ್ರತಿಫಲಿತ ವಾಗಿರುವ ಬಗೆಯನ್ನು ವಿವರಣಾತ್ಮಕವಾಗಿ ವಿಮರ್ಶಾತ್ಮಕವಾಗಿ ಸೈದ್ಧಾಂತಿಕವಾಗಿ ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಈ ಕೃತಿಯಲ್ಲಿ ಅಡವಾಗಿರುವ ಆಧ್ಯಾಯಗಳು ಹೀಗಿವೆ: ಆಫ್ರಿಕನ್ ಹಾಗೂ ಭಾರತೀಯ ಸಮಾಜಗಳ ವಸಾಹತುಸನ್ನಿವೇಶ ವಸಾಹತೀಕರಣ ಹಾಗೂ ನಿರ್ವಸಾಹತೀಕರಣ ಸಿದ್ಧಾಂತಗಳ ಪರಿಶೀಲನೆ , ಆಫ್ರಿಕನ್ ಹಾಗೂ ಕನ್ನಡ ಕಾದಂಬರಿಯ ರೂಪೀಕರಣ ,ಆಫ್ರಿಕನ್ ಹಾಗೂ ಕನ್ನಡ ಕಾದಂಬರಿಯ ದೇಶೀ ಪ್ರೇರಣೆಗಳು ,ಯುರೋಪ್, ಪಶ್ಚಿಮ ಮತ್ತು ಆಫ್ರಿಕಾ : ಸಂಕಥನಗಳಮುಖಾಮುಖಿ; ಅಥೆಂಟಿಕ್ ಆಫ್ರಿಕಾದ ಹುಡುಕಾಟ ,"ನಿಜ' ಭಾರತದ ಕಲ್ಪನೆ; ಅಖಿಲ ಭಾರತೀಯ ಮಾದರಿಗಳು; ಕನ್ನಡ ಕಾದಂಬರಿಯ ಮಾದರಿಗಳು ,ಆಧುನಿಕತೆ ಮತ್ತು ಪರಂಪರೆಗಳ ಮುಖಾಮುಖಿ , ಪರಂಪರೆ ಮತ್ತು ಹಿಂಸೆದ ಮನದ ಮಾದರಿಗಳು , ಆಧುನಿಕ ವ್ಯಕ್ತಿ ವಿಶಿಷ್ಟತಾವಾದಿ ಮಾದರಿಗಳು : ಬಂಡುಕೋರ, ಪರದೇಶಿ, ಪರಕೀಯ ಹಾಗೂ ಸಮಾಜವಾದಿ , ವಸಾಹತೋತ್ತರ ಆಫ್ರಿಕಾ ಮತ್ತು ಭಾರತ : ಅವನತಿ; ಭ್ರಮಾನಿರಸನ, ಕನಸು ಮತ್ತು ನವ ವ್ಯಕ್ತಿತ್ವ ನಿರ್ಮಾಣ , ಪೌರಾಣಿಕ ಪ್ರತೀಕಗಳು, ಪಾರಂಪರಿಕ ರೂಪಗಳು ಹಾಗೂ ದೇಶಿ ರಂಗಭೂಮಿ.

ಈ ಪುಸ್ತಕವನ್ನು 2004ರಲ್ಲಿ  ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿತ್ತು.

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books