ಬಸವೋತ್ತರ ಯುಗದ ವಚನ ಸಾಹಿತ್ಯ

Author : ಗುರುಪಾದ ಮರಿಗುದ್ದಿ

Pages 154

₹ 25.00




Year of Publication: 1993
Published by: ಶ್ರೀ ನಿಜಲಿಂಗೇಶ್ವರ ಗ್ರಂಥಮಾಲೆ
Address: ನಿಡಸೋಸಿ

Synopsys

ಯಾವ ಕಾಲಕ್ಕೂ ಲಿಂಗಮೆಚ್ಚಿ ಅಹುದಹುದೆನ್ನುವ ವಚನಗಳು ಅರಳಿದ್ದು ಘಮಘಮಿಸಿದ್ದು ಹನ್ನೆರಡನೆಯ ಶತಮಾನದಲ್ಲಿ. ನಂತರದ ಎಂಟು ನೂರು ವರ್ಷಗಳ ದೀರ್ಘ ಅವಧಿಯ ವಚನ ಸಾಹಿತ್ಯದ ಸ್ಥಿತಿಗತಿಗಳು ಸವಿವರವಾಗಿ ತಿಳಿದು ಬರುವುದಿಲ್ಲ. ಕಾಲ ಇದಕ್ಕೆ ಸಾಕ್ಷಿಯಾಗಿದ್ದರೂ ಮೌನವಾಗಿದೆ. ಬಸವೋತ್ತರ ಕಾಲದ ತೆರೆ ಸರಿಸಿ ಇತಿಹಾಸದ ಮಂಜು ದಾರಿಯ ಜಾಡು ಹಿಡಿದು ಒಬ್ಬೊಬ್ಬ ವಚನಕಾರರ ಮೇಲೆ ಬೆಳಕು ಹಾಯಿಸಿ ನೋಡುವ ಪ್ರಸ್ತುತ ಪ್ರಯತ್ನ ಸ್ತುತ್ಯಾರ್ಹ ಮತ್ತು ಮೌಲಿಕವಾದದ್ದು. ಉಪಲಬ್ಧ ಸಾಮಗ್ರಿಯನ್ನು ಬಳಸಿಕೊಂಡು ಆಯಾ ವಚನಕಾರರ ಬಗ್ಗೆ ಪ್ರಬಂಧಗಳು ಮಹತ್ವದ ಸಂಗತಿಗಳನ್ನು ಹೊರಗೆಡಹುತ್ತವೆ. ಈ ದಿಸೆಯಲ್ಲಿ ಹೆಚ್ಚಿನ ಅಧ್ಯಯನದ ಅಗತ್ಯವನ್ನು ಸಾಧ್ಯತೆಯನ್ನು ಕೂಡ ಗುರುತಿಸಬಹುದಾಗಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books