ಸಾಹಿತ್ಯ ಆಸ್ವಾದನೆ

Author : ರಾಜಶೇಖರ ಬಿರಾದಾರ

Pages 144

₹ 130.00




Year of Publication: 2020
Published by: ಆಂಕನಹಳ್ಳಿ ಪಾರ್ಥ
Address: ಕೈಲಂಚ ಹೊಬಳಿ, ಬನ್ನಿಕುಪ್ಪೆ, ರಾಮನಗರ ತಾಲೂಕು, ರಾಮನಗರ ಜಿಲ್ಲೆ.
Phone: 9632497558

Synopsys

ಲೇಖಕ ರಾಜಶೇಖರ್ ಬಿರಾದಾರ ಅವರ ಕೃತಿ ‘ಸಾಹಿತ್ಯ ಆಸ್ವಾದನೆ’. ಈ ಕೃತಿಗೆ ಮುನ್ನುಡಿ ಬರೆದ ವಿಠಲರಾವ್ ಟಿ. ಗಾಯಕ್ವಾಡ್, ‘ ಈ ಕೃತಿಯಲ್ಲಿನ ಲೇಖನಗಳು ಓದುಗರಲ್ಲಿ ಒಂದು ಬಗೆಯ ವಿಶಿಷ್ಟ ಸಂವೇದನೆಯನ್ನು ಉಂಟು ಮಾಡುವ ಸ್ವರೂಪದಲ್ಲಿವೆ. ಲೇಖಕರು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡ ಕೃತಿಗಳನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿ ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಅದರಲ್ಲಿನ ಅಂಶಗಳನ್ನೇ ಆಧರಿಸಿ, ವಿವರಣೆ ಮತ್ತು ವಿಶ್ಲೇಷಣೆ ಮಾಡುತ್ತಾ ಹೋಗಿರುವುದು ಗಮನ ಸೆಳೆಯುತ್ತದೆ. ಸಮತೂಕದ ಅವರ ದೃಷ್ಟಿಕೋನ ವಿಮರ್ಶೆಗೆ ಅನುವಾಗಿದೆ’ ಎಂದು ಪ್ರಶಂಸಿದ್ದಾರೆ.

About the Author

ರಾಜಶೇಖರ ಬಿರಾದಾರ

ಲೇಖಕ ರಾಜಶೇಖರ ಬಿರದಾರ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನ್ಹಾಳ ಗ್ರಾಮದವರು. ತಂದೆ ಹಣಮಂತ್ರಾಯಗೌಡ ಬಿರಾದಾರ. ತಾಯಿ ಗಂಗಮ್ಮ ಹ. ಬಿರಾದಾರ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಪೇಠ ಅಮ್ಮಾಪುರದಲ್ಲಿ ಪ್ರೌಢಶಿಕ್ಷಣ, ಸುರಪುರದ ಪ್ರಭು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಿ.ಇಡಿ ನಂತರ ಕರ್ನಾಟಕ ವಿ.ವಿ. ಯಿಂದ ಎಂ.ಎ. ಪದವಿ, ತದನಂತರ, ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ  ಯರಗಟ್ಟಿಯ ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.  ಕೃತಿಗಳು : ವಚನ ಸಾಹಿತ್ಯ ಮತ್ತು ...

READ MORE

Related Books