ನೆತ್ತಿಯ ಗುರಿ ಅಂತರಿಕ್ಷ

Author : ಗುರುಪಾದ ಮರಿಗುದ್ದಿ

Pages 180

₹ 120.00




Year of Publication: 2011
Published by: ಕಣ್ವ ಪ್ರಕಾಶನ
Address: “ ಕಲಾ ಕನಸು” , ನಂ: 894, ಒಂದನೇ ಮೇನ್‌, ನಿಸರ್ಗ ಬಡಾವಣೆ, ಚಂದ್ರಾ ಲೇಔಟ್‌, ಬೆಂಗಳೂರು-560072
Phone: 080-23426778, 9845052481

Synopsys

ಅಮೂರ್ತ ಮೂರ್ತಗೊಳ್ಳವಿಕೆ ಒಂದು ವಿಲಕ್ಷಣ ಪ್ರಕ್ರಿಯೆ. ಅದರ ಹೆಜ್ಜೆಗಳ ಹುಡುಕುತ್ತ ಕತ್ತಲ. ಗವಿಯ ತಡಕುತ್ತ ಅಲೆದ, ಅನುಭವದಲ್ಲಿ, ಆ ಅನುಭವವೇ ಅಮೂಲ್ಯವಾಗುತ್ತದೆ. ಬೆಳಕಿನ ಕಿರಣದ, ಹೊಂಗಿರಣದ ಎಳೆಗಳ ಆಸೆಯನ್ನು ಎಂದಿಗೂ ಬಿಡಕೂಡದು. ಜಗದ ಜೀವಜೀವರುಗಳನ್ನು, ಅವರೆಲ್ಲ ಆಗುಹೋಗುಗಳನ್ನು ಈ ಆಸೆಯೇ ಒಂದಾಗಿಕಟ್ಟಿ ನಿಲ್ಲಿಸಿದೆ. ಇದನ್ನು ಸೃಜನದಲ್ಲಿ ಪರಿಕಿಸುವುದು ವಿಲಕ್ಷಣ ಸಂತಸದ, ಯಾತನೆಯ ಅನುಭೂತಿಯಾಗಿದೆ. ಶಿವ-ಶಕ್ತಿಗಳ ಒಂದಾಗುವಿಕೆಯಲ್ಲಿ ಮೋಡ ಮಿಂಚುಗಳ ಸಂಚಿನಲ್ಲಿ, ಬೆಳಕು, ಕತ್ತಲೆಗಳ...ನಿತ್ಯದಾಟದಲ್ಲಿ ವಿವೇಕವು ಗ್ರಹಿಕೆಗೆ ತುಡಿದಾಗಲೆಲ್ಲ ತಾನೇ ಬೆಬ್ಬಳಿಸಿ, ನಿಲ್ಲುತ್ತದೆ. ಆದರೂ ಸದಾ ಬೆಳಕಿನ ಒರತೆ. ತೊರೆದು. ಅದರ. ರುಚಿ, ವರ್ಣ, ಸ್ವರೂಪಕಾಣಲು ನಮ್ಮ ಚೈತನ್ಯ ಹಾರೈಸುತ್ತಾ ಇರುತ್ತದೆಯಲ್ಲ. ಏಕೆ?

ವಿಮರ್ಶೆ ಏಕಕಾಲಕ್ಕೆ ತಾತ್ವಿಕವಾಗಿರಬೇಕು ಮತ್ತು ವಸ್ತುಸ್ಥಿತಿ ಆಧರಿಸಿರಬೇಕು. ಹಾಗಾಗಿ -ಅದರ ದಾರಿ ಎಂದಿಗೂ ಸುಗಮವಲ್ಲ; ಸರಳವಲ್ಲ, ಏನಿದ್ದರೂ ಅದು  ಕತ್ತಿಯ ಮೇಲಿನ ನಡಿಗೆಯಂತೆ ಜವಾಬ್ದಾರಿ ಹೊಂದಿರುತ್ತದೆ. ಒಂದು ಸಮಾಜ ತನ್ನ; ಸೃಜನಶೀಲತೆಯನ್ನು, ವಿಮರ್ಶಾವಿವೇಕವನ್ನು ಅಗತ್ಯಕ್ಕೆ ತಕ್ಕಂತೆ ಪಡೆಯುತ್ತದೆ. ಕನ್ನಡ ಸಾಹಿತ್ಯ ಆಧುನಿಕ. ಕಾಲಕ್ಕೆ: ಹತ್ತು ಹಲವು ಪ್ರಯೋಗಗಳಿಗೆ ಈಡಾಗುತ್ತ ಹಲವುತತ್ವಗಳನ್ನು ಗರ್ಭೀಕರಿಸಿಕೊಂಡು "ಅಗ್ನಿನಾಲಿಗೆ'ಯಂತೆ ನಿಂತುಬಿಟ್ಟಿದೆ. ಪ್ರಾಚೀನ ಮಾರ್ಗಕಾವ್ಯಗಳು, ನಡುಗನ್ನಡದ ಹಾಡುಗಬ್ಬಗಳು, ತತ್ವಪದಗಳು,ಜಾನಪದ, ಆಶುಕವಿತೆ ಎಲ್ಲವೂ ಕನ್ನಡ ಶಾರದೆಯ ಸತ್ವ ಸಾಮರ್ಥ್ಯಕ್ಕೆಗರಿ ಮೂಡಿಸಿವೆ. ಜೀವಂತ ಬದುಕಿನ ಅನುಭವ ಅನುಭಾವಗಳ ಬಣ್ಣವಾಸನೆಯ ಈ ಕಾಲಕಾಲದ ಸಾಹಿತ್ಯ ಓದಿಗೆ, ಅಧ್ಯಯನಕ್ಕೆ ಇಂದಿಗೂಫಲವತ್ತಾಗಿದೆ. ನೆತ್ತಿಯ ಗುರಿ ಅಂತರಿಕ್ಷ ಉದ್ದೇಶವೂ ಅದೇ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books