‘ಕಾಳಿದಾಸನ ನಾಟಕಗಳ ವಿಮರ್ಶೆ’ ಲೇಖಕ ಎಸ್.ವಿ. ರಂಗಣ್ಣ ಅವರ ಕೃತಿ. ಈ ಕೃತಿಗೆ ಪ್ರೊ.ಜಿ. ವೆಂಕಟಸುಬ್ಬಯ್ಯನವರ ಮುನ್ನುಡಿ ಬರಹವಿದೆ. ಈ ಕೃತಿಯಲ್ಲಿ ಕವಿ ಕಾಳಿದಾಸನ ಮಹತ್ವದ ನಾಟಕಗಳ ವಿಮರ್ಶೆಯಿದೆ. ಇಲ್ಲಿ ಮೊದಲಿಗೆ ಮಾಲವಿಕಾಗ್ನಿಮಿತ್ರ ನಾಟಕದ ವಿಮರ್ಶೆ ಅಡಿಯಲ್ಲಿ ಹೆಸರು, ಆಧಾರ, ನಾಟಕಕ್ಕೆ ತಟ್ಟಿರುವ ಅಭಿಶಾಪ, ಅಂಕಗಳ ವಿವರಣೆ, ಕಥಾವಸ್ತುವಿನ ಸಂವಿಧಾನ, ನಾಟಕೀಯ ನೈಪುಣ್ಯ, ಪಾತ್ರ ಚಿತ್ರಣ- ಮುಖ್ಯ ಪಾತ್ರಗಳು, ಹೆಂಗಸರ ಸಂಕಟ, ಪಾತ್ರ ಚಿತ್ರಣ- ಇತರ ಪಾತ್ರಗಳು, ಶೈಲಿಯ ವಿಚಾರ, ಯಾವ ಬಗೆಯ ನಾಟಕ, ಉಪಸಂಹಾರ, ಟಿಪ್ಪಣಿಗಳು, ಆಧಾರ ಗ್ರಂಥಮಾಲೆ ಸಂಕಲನಗೊಂಡಿದ್ದರೆ. ಎರಡನೇ ವಿಭಾಗದಲ್ಲಿ ವಿಕ್ರಮೋರ್ವಶೀಯ ನಾಟಕದ ವಿಮರ್ಶೆ ಇದೆ. ಇದರ ಅಡಿಯಲ್ಲಿ ಪ್ರಸ್ತಾವನೆ, ಹೆಸರು, ಆಧಾರ, ಅಂಕಗಳ ವಿವರಣೆ, ನಾಟಕದ ಅಂತ್ಯ, ಇತಿವೃತ್ತದ ವಿನ್ಯಾಸ, ಪಾತ್ರ ಚಿತ್ರಣದ ವಿಧಾನ, ಮುಖ್ಯ ಪಾತ್ರಗಳು, ಯಾವ ಬಗೆಯ ನಾಟಕ, ಶೈಲಿಯ ವಿಚಾರ, ಕಾಳಿದಾಸನ ಎಷ್ಟನೇ ನಾಟಕ, ನಾಟಕದ ಅಂದ ಚೆಂದ, ವಿಕ್ರಮೋರ್ವಶಿಯ ವೂ ಶಾಕುನ್ತಲ ವೂ, ನಾಟಕದ ಪ್ರಶಸ್ತಿ, ಟಿಪ್ಪಣಿಗಳು, ಆಧಾರ ಗ್ರಂಥಮಾಲೆ. ವಿಚಾರಗಳ ಸಂಗ್ರಹವಿದೆ. ಶಾಕುನ್ತಲ ನಾಟಕದ ವಿಮರ್ಶೆ ವಿಭಾಗದಲ್ಲಿ ಹೆಸರು, ಆಧಾರ, ಇತಿವೃತ್ತದ ವಿನ್ಯಾಸ, ವಿಸ್ಮೃತಿಯ ವಿಚಾರ, ಶಾಪದ ವಿಚಾರ, ಅಂಕಣಗಳ ವಿವರಣೆ, ನಾಟಕೀಯ ನೈಪುಣ್ಯ, ಪಾತ್ರ ಚಿತ್ರಣ- ಮುಖ್ಯ ಪಾತ್ರಗಳು, ಪಾತ್ರ ಚಿತ್ರಣ- ಇತರ ಪಾತ್ರಗಳು, ಶಾಕುನ್ತಲವೊಂದು ಟ್ರ್ಯಾಜೆಡಿ, ಶಾಕುನ್ತಲದ ಉದ್ದೇಶ ಜೀವನದರ್ಶನ, ಶೈಲಿ ಇತ್ಯಾದಿ, ಶಾಕುನ್ತದ ಪ್ರಶಸ್ತಿ, ಟಿಪ್ಪಣಿಗಳು, ಆಧಾರ ಗ್ರಂಥಮಾಲೆ, ಪರಿಶಿಷ್ಟ ಎಂಬ ವಿಚಾರಗಳಿವೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ 1898ರ ಡಿಸೆಂಬರ್ 24ರಂದು ಜನಸಿದರು. ತಂದೆ ವೆಂಕಟಸುಬ್ಬಯ್ಯ- ತಾಯಿ ವೆಂಕಟಲಕ್ಷ್ಮಮ್ಮ. ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ (1921) ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು. 1923ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ತುಮಕೂರಿನಲ್ಲಿ (1928-33), 1933ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ 1954ರಲ್ಲಿ ನಿವೃತ್ತರಾದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ. ಅವರು ...
READ MORE